ಸುಳ್ಯ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಅ.28 ರಂದು ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನ ಕಾರ್ಯಕ್ರಮದ ಪ್ರಯುಕ್ತ ಸುಳ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕೋಟಿ ಕಂಠ ಗಾಯನ ಕಾರ್ಯಕ್ರಮ ನಡೆಯಿತು. ಗಾಯಕಿ ಆರತಿ ಪುರುಷೋತ್ತಮರ ನೇತೃತ್ವದಲ್ಲಿ ಗಾಯನ ನಡೆಯಿತು. ಸುಳ್ಯದ ಸೈಂಟ್ ಜೋಸೆಫ್ ಶಾಲೆಯ ಮತ್ತು ಶಾರದಾ ಕಾಲೇಜಿನ ವಿದ್ಯಾರ್ಥಿಗಳು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಡಿಪೋ ಮೆನೇಜರ್, ಶಿಕ್ಷಕರು, ಸಂಚಾರ ನಿಯಂತ್ರಕರು, ಚಾಲಕರು, ನಿರ್ವಾಹಕರು ಮೊದಲಾದವರು ಉಪಸ್ಥಿತರಿದ್ದರು.