ಕೋಟೇಶ್ವರ:ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ.ಕೆ.ವಿ.ಚಿದಾನಂದ ಗೌಡ ಹಾಗೂ ಮನೆಯವರಿಂದ ಸಮರ್ಪಣೆ ಮಾಡುವ ಬ್ರಹ್ಮರಥಕ್ಕೆ ರಥಪೂಜೆ ನಡೆಯಿತು.23ರಂದು ಸಂಜೆ ಬ್ರಹ್ಮರಥ ಶಿಲ್ಪಿ ರಾಜಗೋಪಾಲ ಆಚಾರ್ಯರ ಶಿಲ್ಪಕಲಾ ಶಾಲೆ ಕೋಟೇಶ್ವರದಲ್ಲಿ ರಥಪೂಜೆ ನಡೆಯಿತು.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೃಷನ್ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಉಪಾಧ್ಯಕ್ಷೆ ಶೊಭಾ ಚಿದಾನಂದ, ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಕಾರ್ಯದರ್ಶಿಗಳಾದ
ಡಾ.ಐಶ್ವರ್ಯ, ಕೆ.ವಿ.ಹೇಮನಾಥ, ಬ್ರಹ್ಮರಥ ಸಮರ್ಪಣಾ ಸಮಿತಿಯ ಅಧ್ಯಕ್ಷ ನಾರಾಯಣ ಕೇಕಡ್ಕ, ಪ್ರಧಾನ ಕಾರ್ಯದರ್ಶಿ ಡಾ.ಲೀಲಾಧರ ಡಿ.ವಿ. ಕೃಪಾಶಂಕರ ತುದಿಯಡ್ಕ, ಚಂದ್ರಶೇಖರ ಪೇರಾಲು, ಗಣೇಶ್ ಆಳ್ವ, ಸನತ್. ಪಿ.ಆರ್. ಡಾ.ಪುರುಷೋತ್ತಮ ಕೆ.ಜಿ. ಮತ್ತಿತರರು ಉಪಸ್ಥಿತರಿದ್ದರು. ಡಿ. ಡಿ.24 ಪೂರ್ವಾಹ್ನ ಗಂಟೆ 8ಕ್ಕೆ
ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ ಕೋಟೇಶ್ವರದಲ್ಲಿ ಬ್ರಹ್ಮರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಸುಳ್ಯಕ್ಕೆ ರಥ ಯಾತ್ರೆ ಆರಂಭವಾಗಲಿದೆ.
ಮಂಗಳೂರು, ಬಿ.ಸಿ. ರೋಡ್. ಮಾಣೆ ಹಾಗೂ ಪುತ್ತೂರಿನಲ್ಲಿ ವಿಶೇಷ ಸ್ವಾಗತ ಕೋರಿ ಪುತ್ತೂರಿನ ತೆಂಕಿಲದಲ್ಲಿ ರಥ ತಂಗಲಿದೆ. ಡಿ.25ರಂದು ಅಪರಾಹ್ನ 2 ಗಂಟೆಗೆ ಬ್ರಹ್ಮರಥವು ಕನಕಮಜಲಿನ ಆತ್ಮರಾಮ ಭಜನಾ ಮಂದಿರದಿಂದ ವಾಹನ ಮೆರವಣೆಗೆಯೊಂದಿಗೆ ಶಾಸ್ತ್ರಿ ವೃತ್ತಕ್ಕೆ ಆಗಮಿಸಲಿದೆ. ಅಪರಾಹ್ನ 3 ಗಂಟೆಗೆ ಬ್ರಹ್ಮರಥವನ್ನು ಬ್ಯಾಂಡ್, ವಾಲಗ, ವೇದ ಘೋಷ ಹಾಗೂ ಕುಣಿತ ಭಜನೆಯೊಂದಿಗೆ ವೈಭವದಿಂದ ದೇವಳದ ರಾಜಗೋಪುರದ ಬಳಿ ಸ್ವಾಗತಿಸುವುದು. ಡಿ.31ರಂದುಪೂ. ಗಂಟೆ 10ಕ್ಕೆ ಡಾ. ಕೆ. ವಿ. ಚಿದಾನಂದ ಹಾಗೂ ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ
ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ. ಜ.1ರಂದು ರಾತ್ರಿ ಗಂಟೆ 7.00ರಿಂದ ಬ್ರಹ್ಮ ರಥದ ಆಲಯಕ್ಕೆ ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ವಾಸ್ತು ಹೋಮ, ವಾಸ್ತುಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.ಡಿ.2 ರಂದು ಸಂಜೆ 7ರಿಂದ ಗಣಹೋಮ, ಕಲಶಾಭಿಷೇಕಗಳು ಹಾಗೂ ಪೂರ್ವಾಹ್ನ 9.15ರಿಂದ 9.35ರ ನಡುವಿನ ಮಕರ ಲಗ್ನದ ಸುಮೂರ್ಹತದಲ್ಲಿ ಬ್ರಹ್ಮರಥದ ಭೂ ಸ್ಪರ್ಶ, ಬ್ರಹ್ಮರಥ ಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.