ಸುಳ್ಯ: ಶಿಲಾನ್ಯಾಸಗೊಂಡ ಸುಳ್ಯದ 110 ಕೆವಿ ವಿದ್ಯುತ್ ಸಬ್ ಸ್ಟೇಷನ್ ಕಾಮಗಾರಿ ಆರಂಭಕ್ಕೆ ವಿಳಂಬ ಯಾಕೆ ಎಂದು ಸದನದಲ್ಲಿ ಪ್ರಶ್ನಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಸುಳ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಶಿಲಾನ್ಯಾಸಗೊಂಡ
ಕಾಮಗಾರಿಗಳು ಯಾಕೆ ಆರಂಭವಾಗಿಲ್ಲ. ಅದನ್ನು ಯಾಕೆ ತಡೆ ಹಿಡಿಯಲಾಗಿದೆ ಎಂಬುದನ್ನು ಸದನದಲ್ಲಿ ಪ್ರಶ್ನಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲು ಪ್ರಯತ್ನ ನಡೆಸುವುದಾಗಿ ಹೇಳಿದರು. ನಗರ ಸ್ಥಳೀಯ ಆಡಳಿತ ಅಧ್ಯಕ್ಷ, ಉಪಾಧ್ಯಕ್ಷ ಅವಧಿ ಮುಗಿದು ಹಲವು ತಿಂಗಳಾಗಿರುವ ಹಿನ್ನಲೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ಭಕ್ತ ವತ್ಸಲ ಸಮಿತಿ ವರದಿಯನ್ನು ಆಧರಿಸಿ ಆದಷ್ಟು ಬೇಗ ಪ್ರಕಟಿಸಬೇಕು ಎಂದು ಸರಕಾರವನ್ನು ಒತ್ತಾಯಿಸುವುದಾಗಿ ಅವರು ಹೇಳಿದರು.









