ಮುಂಬೈ: ವಿಶ್ವಕಪ್ ಕ್ರಿಕೆಟ್ನ ಲೀಗ್ ಹಂತದ 45 ಪಂದ್ಯಗಳು ಮುಗಿದಿದೆ. ಎಲ್ಲಾ 10 ತಂಡಗಳು ತಲಾ 9 ಪಂದ್ಯಗಳನ್ನು ಆಡಿದ್ದಾರೆ. ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದಾರೆ. 9 ಪಂದ್ಯಗಲಲ್ಲಿ ಎರಡು ಶತಕ ಹಾಗೂ 5 ಅರ್ಧ ಶತಕಗಳ ಸಹೀತ ಕೊಹ್ಲಿ 594 ರನ್ ಕಲೆ ಹಾಕಿದ್ದಾರೆ. 591 ರನ್ ಗಳಿಸಿರುವ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿಕಾಕ್ ಎರಡನೇ ಸ್ಥಾನದಲ್ಲಿ, 565 ರನ್ ಗಳಿಸಿದ
ನ್ಯೂಝಿಲೆಂಡ್ನ ರಚಿನ್ ರವೀಂದ್ರ ಮೂರನೇ ಸ್ಥಾನದಲ್ಲಿದ್ದಾರೆ. 503 ರನ್ ಗಳಿಸಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮ ನಾಲ್ಕನೇ ಸ್ಥಾನದಲ್ಲಿ ಮತ್ತು 499 ರನ್ ಬಾರಿಸಿದ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಐದನೇ ಸ್ಥಾನದಲ್ಲಿ ಇದ್ದಾರೆ.
ಬೌಲರ್ಗಳಲ್ಲಿ 22 ವಿಕೆಟ್ ಪಡೆದ ಆಸ್ಟ್ರೇಲಿಯಾ ಆಡಂ ಝಂಪಾ ಪ್ರಥಮ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ದಿಲ್ಸಾನ್ ಮಧುಶಂಕ(21), ಪಾಕಿಸ್ತಾನದ ಶಹೀನ್ ಅಫ್ರಿದಿ(18), ದಕ್ಷಿಣ ಆಫ್ರಿಕಾದ ಜೆರಾಲ್ಡ್ ಕೋಯ್ಟ್ಜಿ(18) ಹಾಗೂ ಮಾರ್ಕೋ ಜಾನ್ಸನ್(17) ನಂತರದ ಸ್ಥಾನದಲ್ಲಿ ಇದ್ದಾರೆ.
ಈ ಬಾರಿ ದಾಖಲಾದ ರನ್ ಎಷ್ಟು?
ಈ ಬಾರಿಯ ಏಕದಿನ ವಿಶ್ವಕಪ್ನಲ್ಲಿ ರನ್ ಪ್ರವಾಹವೇ ಹರಿದು ಬಂದಿದೆ. ಲೀಗ್ ಹಂತದ 45 ಪಂದ್ಯಗಳಲ್ಲಿ 10 ತಂಡಗಳು ಒಟ್ಟು 23,002 ರನ್ಗಳನ್ನು ಕಲೆಹಾಕಿದ್ದಾರೆ. ಈ ಬಾರಿಯ ವಿಶ್ವಕಪ್ನಲ್ಲಿ ಇದುವರೆಗೆ 592 ಸಿಕ್ಸ್ಗಳನ್ನು ಸಿಡಿಸಲಾಗಿದೆ. ಒಟ್ಟು ಕ್ಯಾಚ್ಗಳ ಸಂಖ್ಯೆ 429. ಒಟ್ಟು 35 ಶತಕಗಳು ಮೂಡಿ ಬಂದಿವೆ. ಲೀಗ್ ಹಂತದಲ್ಲಿ ಒಟ್ಟು 113 ಅರ್ಧಶತಕಗಳನ್ನು ಬಾರಿಸಿದ್ದಾರೆ. ಒಟ್ಟು 683 ವಿಕೆಟ್ಗಳನ್ನು ಕಬಳಿಸಲಾಗಿದೆ. 2109 ಫೋರ್ ದಾಖಲಾಗಿದೆ.
ಏಕದಿನ ವಿಶ್ವಕಪ್ನ ಮೂರು ಪಂದ್ಯಗಳು ಮಾತ್ರ ಬಾಕಿಯಿವೆ. ಇದರಲ್ಲಿ 2 ಸೆಮಿ ಫೈನಲ್ಸ್ ಹಾಗೂ ಒಂದು ಫೈನಲ್ ಪಂದ್ಯ ಸೇರಿದೆ.









