ಸುಳ್ಯ:ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂ ಮಹಾಸಭೆಯು ಸಂಘದ ಕಚೇರಿಯಲ್ಲಿ ಅಧ್ಯಕ್ಷ ಭಾಸ್ಕರನ್ ನಾಯರ್ ಮಧುವನರವರ ಅಧ್ಯಕ್ಷತೆಯಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಕೆಎನ್ಎಸ್ಎಸ್ ಮಂಗಳೂರು ಕರಯೋಗಂನ ಮಾಜಿ ಅಧ್ಯಕ್ಷ ವಿಜಯಕುಮಾರ್ ನಾಯರ್, ಉಪಾಧ್ಯಕ್ಷ ಎನ್. ರವೀಂದ್ರನಾಥ್ ಆಗಮಿಸಿದ್ದರು.ಚುನಾವಣಾಧಿಕಾರಿಯಾಗಿ
ಕೇಂದ್ರ ಸಮಿತಿ ಪ್ರತಿನಿಧಿ, ನೆಲ್ಯಾಡಿ ಕರಯೋಗಂನ ರಘುನಾಥನ್ ನಾಯರ್ ಹಾಗೂ ವೀಕ್ಷಕರಾಗಿ ನೆಲ್ಯಾಡಿ ಕರಯೋಗಂ ಕಾರ್ಯದರ್ಶಿ ವಿನೋದ್ಕುಮಾರ್ ಆಗಮಿಸಿದ್ದರು.ಮಂಗಳೂರು ಕರಯೋಗಂನ ಕಾರ್ಯಕಾರಿ ಸಮಿತಿ ಸದಸ್ಯ ಇ.ವಿ.ನಾಯರ್, ಕೋಶಾಧಿಕಾರಿ ಜೆ.ಕೆ.ನಾಯರ್ , ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಪ್ರಭಾಕರನ್ ಉಪಸ್ಥಿತರಿದ್ದರು.ಕರಯೋಗಂ ಕಾರ್ಯದರ್ಶಿ ಬಾಲಕೃಷ್ಣ ನಾಯರ್ ಎಸ್.ಬಿ. ವರದಿ ವಾಚಿಸಿದರು. ಕೋಶಾಧಿಕಾರಿ ಪ್ರಭಾಕರ ನಾಯರ್ ಸ್ವಾಗತ್ ಲೆಕ್ಕಪತ್ರ ಮಂಡಿಸಿದರು.ನಿರ್ಗಮನ ಅಧ್ಯಕ್ಷ ಭಾಸ್ಕರನ್ ನಾಯರ್, ನೂತನ ಅಧ್ಯಕ್ಷ ಕೃಷ್ಣನ್ ನಾಯರ್ ಕುತ್ತಮೊಟ್ಟೆ, ನೂತನ ಕಾರ್ಯದರ್ಶಿ ಶಶಿಧರ ನಾಯರ್ ಉಬರಡ್ಕ ಮಾತನಾಡಿದರು. ಶ್ರೀಲಯ ಪ್ರಾರ್ಥಿಸಿದರು. ಚಂದ್ರಮೋಹನ್ ನಾಯರ್ ಕಾರ್ಯಕ್ರಮ ನಿರೂಪಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿಯ ಸುಳ್ಯ ಕರಯೋಗಂನ ಮುಂದಿನ ಎರಡು ವರ್ಷಗಳ ಸಾಲಿಗೆ ನೂತನ ಅಧ್ಯಕ್ಷರಾಗಿ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಹಾಗೂ ಕಾರ್ಯದರ್ಶಿಯಾಗಿ ಶಶಿಧರ ನಾಯರ್ ಉಬರಡ್ಕ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ದುರ್ಗಾಕುಮಾರ್ ನಾಯರ್ಕೆರೆ, ಜೊತೆ ಕಾರ್ಯದರ್ಶಿಯಾಗಿ ವಿಶ್ವನಾಥನ್ ನಾಯರ್ ಮಧುವನ, ಕೋಶಾಧಿಕಾರಿಯಾಗಿ ಪ್ರಭಾಕರ ನಾಯರ್ ಸ್ವಾಗತ್, ಸಹ ಕೋಶಾಧಿಕಾರಿಯಾಗಿ ಸಿ.ಎಚ್. ಪ್ರಭಾಕರ ನಾಯರ್ ಆಯ್ಕೆಗೊಂಡರು. ಕೇಂದ್ರ ಸಮಿತಿ ಸದಸ್ಯರಾಗಿ ಭಾಸ್ಕರನ್ ನಾಯರ್ ಮಧುವನ, ಬಾಲಕೃಷ್ಣ ನಾಯರ್ ಎಸ್.ಬಿ. ಆಯ್ಕೆಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪದ್ಮನಾಭನ್ ನಾಯರ್ ಮಧುವನ, ಚಂದ್ರಶೇಖರ ನಾಯರ್ ಉಬರಡ್ಕ, ಚಂದ್ರಶೇಖರ ನಾಯರ್ ಸುಬ್ರಹ್ಮಣ್ಯ, ಅಭಿನಂದನ್ ನಾಯರ್, ಮಧುಸೂದನ ನಾಯರ್ ಉಬರಡ್ಕ, ಹರಿದಾಸ್ ಪಾಲಡ್ಕ, ಮಧುಕರ ಮಧುವನ, ಶಿಜು ನಾಯರ್ ಮರ್ಕಂಜ, ದಾಕ್ಷಾಯಿಣಿ ಭಾಸ್ಕರನ್ ನಾಯರ್ ಮಧುವನ, ಶಕುಂತಲಾ ಕೃಷ್ಣನ್ ನಾಯರ್ ಕುತ್ತಮೊಟ್ಟೆ ಆಯ್ಕೆಗೊಂಡರು.
ಕೃಷ್ಣನ್ ನಾಯರ್ ಕುತ್ತಮೊಟ್ಟೆ, ಶಶಿಧರ ನಾಯರ್ ಉಬರಡ್ಕ,ಭವಾನಿ ನಾರಾಯಣನ್ ನಾಯರ್ ಬಾರ್ಪಣೆ,ಶೈಲಜಾ ಜಯನ್ ನೀರಬಿದಿರೆ
ಮಹಿಳಾ ಘಟಕದ ಪದಾಧಿಕಾರಿಗಳು:
ಮಹಿಳಾ ಘಟಕದ ಮುಂದಿನ ಎರಡು ವರ್ಷಗಳ ಸಾಲಿಗೆ ನೂತನ ಅಧ್ಯಕ್ಷೆಯಾಗಿ ಭವಾನಿ ನಾರಾಯಣನ್ ನಾಯರ್ ಬಾರ್ಪಣೆ ಹಾಗೂ ಕಾರ್ಯದರ್ಶಿಯಾಗಿ ಶೈಲಜಾ ಜಯನ್ ನೀರಬಿದಿರೆ ಆಯ್ಕೆಯಾಗಿದ್ದಾರೆ.
ನೂತನ ಉಪಾಧ್ಯಕ್ಷರಾಗಿ ಪ್ರತಿಭಾ ದುರ್ಗಾಕುಮಾರ್, ಜೊತೆ ಕಾರ್ಯದರ್ಶಿಯಾಗಿ ಸುಧಾ ಚಂದ್ರಮೋಹನ್, ಕೋಶಾಧಿಕಾರಿಯಾಗಿ ಜ್ಯೋತಿ ಮಧುಸೂಧನ್, ಸಹ ಕೋಶಾಧಿಕಾರಿಯಾಗಿ ಬಿಂದು ಗೋವಿಂದನ್ ಆಯ್ಕೆಗೊಂಡರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ
ರಜಿತಾ ಗಣೇಶ್ ಸುಬ್ರಹ್ಮಣ್ಯ, ನಳಿನಿ ವಿಶ್ವನಾಥ ನಾಯರ್ ಮಧುವನ, ವಾಣಿ ರಮೇಶ್, ಶ್ರೀಮತಿ ಶಕುಂತಳಾ ಕೃಷ್ಣನ್, ಕುಸುಮಾ ವೇಣು, ಸುನಿತಾ ಮಧು, ದಾಕ್ಷಾಯಣಿ ಭಾಸ್ಕರನ್ ಮಧುವನ, ವೀಣಾ ಪ್ರಭಾಕರನ್, ಅರುಣಾ ಪ್ರಮೋದ್, ಶ್ರೀಜಿಶಾ ಚಂದ್ರಶೇಖರ್, ಶಶಿಕಲಾ ಪ್ರಭಾಕರನ್, ಶ್ರೀಕಲಾ ಬಾಲಕೃಷ್ಣನ್ ಆಯ್ಕೆಯಾದರು.