ಸುಳ್ಯ:ಕೇರಳದ ಕಲ್ಲಿಕೋಟೆಯಲ್ಲಿರುವ ಸಾಂಸ್ಕೃತಿಕ, ಧಾರ್ಮಿಕ,ಶೈಕ್ಷಣಿಕ, ಸಮುಚ್ಚಯ ಮತ್ತು ಆಧುನಿಕ ಸಾಂಪ್ರದಾಯಿಕ ಚಿಕಿತ್ಸಾ ಸೌಲಭ್ಯ ದ ಹೆಲ್ತ್ ಸಿಟಿ ಮರ್ಕಸ್ ನಾಲೆಡ್ಜ್ ಸಿಟಿಗೆ ಸುಳ್ಯದ ವಿವಿಧ ಸಂಘ ಸಂಸ್ಥೆಗಳ ಮುಸ್ಲಿಂ ಮುಖಂಡರ ನಿಯೋಗ ಭೇಟಿ ನೀಡಿತು ಮರ್ಕಸ್ ಶಿಲ್ಪಿ ಎ. ಪಿ. ಅಬೂಬಕ್ಕರ್ ಮುಸ್ಲಿಯಾರ್ ರವರ ಪುತ್ರ ಡಾ. ಹಕೀಮ್ ಆಜ್ಹರಿ ಯವರೊಂದಿಗೆ
ಸಮಾಲೋಚನೆ ನಡೆಸಿದರು.ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಎಂ. ಮುಸ್ತಫ, ಸುಳ್ಯ ತಾಲೂಕು ಸುನ್ನಿ ಜಂಇಯ್ಯತುಲ್ ಉಲಮ ಅಧ್ಯಕ್ಷರು ಅಸ್ಸಯ್ಯದ್ ಕುಂಞಿಕೋಯ ತಂಙಳ್, ರಾಜ್ಯ ಮದರಸ ಶಿಕ್ಷಕರ ಸಂಘ ದ ಖಜಾಂಚಿ ಇಬ್ರಾಹಿಂ ಸಖಾಫಿ ಪುಂಡೂರ್,ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್. ಉಮ್ಮರ್, ಸುನ್ನಿ ಮ್ಯಾನೆಜ್ ಮೆಂಟ್ ಅಸೋಸಿಯೇಷನ್ ಜಿಲ್ಲಾ ಪದಾಧಿಕಾರಿ ಉಮ್ಮರ್ ಮುಸ್ಲಿಯಾರ್ ಮರ್ಧಾಳ, ಅನ್ಸಾರಿಯ ಮ್ಯಾರೇಜ್ ಹಾಲ್ ನಿರ್ಮಾಣ ಸಮಿತಿ ಅಧ್ಯಕ್ಷ ಖಾದರ್ ಪಟೇಲ್, ಮುಸ್ಲಿಂ ಮುಖಂಡರಾದ ಉಮ್ಮರ್ ಹಾಜಿ ಮೆಟ್ರೋ, ಸಂಶುದ್ದೀನ್ ಭಾರತ್, ಅಬ್ದುಲ್ ಗಫೂರ್, ಗಾಂಧಿನಗರ ಮದರಸ ಶಿಕ್ಷಕರುಗಳಾದ ಲತೀಫ್ ಸಖಾಫಿ ಗೂನಡ್ಕ, ಇರ್ಫಾನ್, ಅಬ್ದುಲ್ ಖಾದರ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು