ಕೋಲ್ಕತ್ತ: ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 18 ರನ್ಗಳಿಂದ ಗೆಲುವು ಸಾಧಿಸಿತು. ಈ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡ ಐಪಿಎಲ್ನಲ್ಲಿ ಪ್ಲೇಆಫ್ ಪ್ರವೇಶಿಸಿತು. ಮೊದಲು ಬ್ಯಾಟ್ ಮಾಇದ ಕೋಲ್ಕತ್ತ ನೈಟ್ ರೈಡರ್ಸ್:16 ಓವರ್ಗಳಲ್ಲಿ 7 ಕ್ಕೆ 157 ಗಳಿಸಿತು. 158 ರನ್ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್
ತಂಡ 16 ಓವರ್ಗಳಲ್ಲಿ 8 ವಿಕೆಟ್ಗೆ 139 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಹರ್ಷಿತ್ ರಾಣಾ (34ಕ್ಕೆ2), ವರುಣ್ ಚಕ್ರವರ್ತಿ (17ಕ್ಕೆ2) ಹಾಗೂ ಆ್ಯಂಡ್ರೆ ರಸೆಲ್ (34ಕ್ಕೆ2) ಪರಿಣಾಮಕಾರಿ ಬೌಲಿಂಗ್ ಮಾಡಿದರು. ಇಶಾನ್ ಕಿಶಾನ್ (40, 22ಎ), ತಿಲಕ್ ವರ್ಮಾ (32, 17ಎ) ಹಾಗೂ ನಮನ್ ಧೀರ್ (17,6ಎ) ಅವರ ಪ್ರಯತ್ನ ಕೈಗೂಡಲಿಲ್ಲ.
ಪಂದ್ಯಕ್ಕೂ ಮುನ್ನ ಮಳೆ ಬಂದ ಕಾರಣ ಇನಿಂಗ್ಸ್ ಅನ್ನು 16 ಓವರ್ಗಳಿಗೆ ನಿಗದಿ ಪಡಿಸಲಾಯಿತು. ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೋಲ್ಕತ್ತ ತಂಡಕ್ಕೆ ವೆಂಕಟೇಶ್ ಅಯ್ಯರ್ (42; 21ಎ)ನಿತೀಶ್ ರಾಣಾ (33) ಹಾಗೂ ಆ್ಯಂಡ್ರೆ ರಸೆಲ್ (24) ತಂಡಕ್ಕೆ ಬಲ ತುಂಬಿದರು.