ಚೆನ್ನೈ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ 2023 ಟೂರ್ನಿ ಪಂದ್ಯದಲ್ಲಿ ತನ್ನ ಗೆಲುವಿನ ಅಭಿಯಾನ ಮುಂದುವರಿಸಿರುವ ನ್ಯೂಝಿಲ್ಯಾಂಡ್ ಅಫ್ಘಾನದ ವಿರುದ್ಧ 149 ರನ್ಗಳ ಜಯ ಗಳಿಸಿದೆ. ನ್ಯೂಝಿಲ್ಯಾಂಡ್ ನೀಡಿದ 289 ರನ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ 34.4 ಓವರ್ ಗಳಲ್ಲಿ 139 ರನ್ಗೆ ಆಲೌಟ್ ಆಯಿತು.ಸತತ ನಾಲ್ಕು ಪಂದ್ಯಗಳಲ್ಲಿ ಜಯ
ಗಳಿಸಿದ ನ್ಯೂಝಿಲ್ಯಾಂಡ್ ಪಾಯಿಂಟ್ ಪಟ್ಟಿಯಲ್ಲಿ 8 ಅಂಕ ಗಳಿಸುವುದರೊಂದಿಗೆ ಅಗ್ರಸ್ಥಾನಕ್ಕೇರಿತು. ನ್ಯೂಝಿಲೆಂಡ್ ಪರ ಮಿಷೆಲ್ ಸ್ಯಾಂಟ್ನರ್ , ಲೊಕಿ ಫರ್ಗ್ಯೂಸನ್ ತಲಾ 3 ವಿಕೆಟ್ ಪಡೆದರು. ಟೆಂಟ್ ಬೋಲ್ಟ್ 2, ಮ್ಯಾಟ್ ಹೆನ್ರಿ,ರಚಿನ್ ರವೀಂದ್ರ ತಲಾ ಒಂದು ವಿಕೆಟ್ ಪಡೆದರು.ಮೊದಲು ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನಿಸ್ತಾನ ನಾಯಕ ಅಶ್ಮಾತುಲ್ಲಾ ಶಾಹೀದಿ ಬೌಲಿಂಗ್ ಆಯ್ದುಕೊಂಡರು.
ಬ್ಯಾಟಿಂಗ್ ಬಂದ ನ್ಯೂಝಿಲ್ಯಾಂಡ್ ವಿಲ್ ಯಂಗ್ 4 ಬೌಂಡರಿ 3 ಸಿಕ್ಸರ್ ಸಹಿತ 54 ರನ್ ಬಾರಿಸಿದರು. ನಾಯಕ ಟಾಮ್ ಲಾಥಮ್ 74 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸರ್ ಸಹಿತ 68 ರನ್ ಬಾರಿಸಿದರೆ,ಗ್ಲೇನ್ ಫಿಲಿಪ್ಸ್ 80 ಎಸೆತಗಳಲ್ಲಿ 4 ಬೌಂಡರಿ 4ಸಿಕ್ಸರ್ ಸಹಿತ 71 ಗಳಿಸಿದರು.