ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್, ಹಾಗು ತೆಕ್ಕಿಲ್ ಸಮೂಹ ಶಿಕ್ಷಣ ಸಂಸ್ಥೆಯ ನೇತೃತ್ವದಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳ ಸಾಂಸ್ಕೃತಿಕ ಹಬ್ಬ ತೆಕ್ಕಿಲ್ ಶಾಲೆಯಲ್ಲಿ ನಡೆಯಿತು. ಗ್ರಾಮದ 7 ಪ್ರಾಥಮಿಕ ಹಾಗೂ 4 ಪ್ರೌಢಶಾಲೆ ಮಕ್ಕಳು ಸಾಂಸ್ಕೃತಿಕ ಹಬ್ಬದಲ್ಲಿ ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ವಸ್ತು ಪ್ರದರ್ಶನವನ್ನು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ. ಪಿ ಜಗದೀಶ್ ಹಾಗೂ ದಿನಕರ ಸಣ್ಣಮನೆ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ವಹಿಸಿದ್ದರು. ಸಭಾ ಕಾರ್ಯಕ್ರಮಕ್ಕೆ

ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯದರ್ಶಿ ದಾಮೋದರ ಮಾಸ್ಟರ್, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಚಾಲನೆ ನೀಡಿದರು.ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗದೀಶ್ ರೈ ಉಪಸ್ಥಿತರಿದ್ದರು. ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಧಿಕಾರಿ ಎನ್.ಭವಾನಿ ಶಂಕರ್ ಭಾಗವಹಿಸಿದ್ದರು. ಕ್ಷೇತ್ರ ಶಿಕ್ಷಣಧಿಕಾರಿ ಎಸ್.ಪಿ. ಮಹದೇವ್, ಕೆ. ವಿ. ಜಿ. ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾದರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ, ಪಂಚಾಯತ್ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಸುಂದರಿ ಮುಂಡಡ್ಕ, ಅಬೂಸಾಲಿ ಪಿ. ಕೆ. ಸುಮತಿ ಶಕ್ತಿವೇಲು, ಎಸ್. ಕೆ. ಹನೀಫ್, ರಜನಿ ಶರತ್, ಅನುಪಮಾ, ವಿಮಲಾ, ವಿಜಯಕುಮಾರ್, ತೆಕ್ಕಿಲ್ ಶಾಲಾ ಆಡಳಿತಾಧಿಕಾರಿ ರಹೀಮ್ ಬೀಜದಕಟ್ಟೆ ನಿವೃತ ಶಿಕ್ಷಕ ಚಿದಾನಂದ ಮಾಸ್ಟರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ರಾಮಚಂದ್ರ ಕಲ್ಲಗದ್ದೆ, ತೆಕ್ಕಿಲ್ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನಕರ ಗೌಡ ಸಣ್ಣಮನೆ, ಸೊಸೈಟಿ ನಿರ್ದೇಶಕರಾದ ಯಮುನಾ ಬಿ. ಎಸ್. ಗಣಪತಿಭಟ್, ಗ್ರಾಮ ಕರಣಿಕರಾದ ಮಿಯಾ ಶಾಬ್ ಮುಲ್ಲಾ ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್ ಲಯನ್ಸ್ ಕ್ಲಬ್ ಅಧ್ಯಕ್ಷೆ ನಳಿನಿ ಕಿಶೋರ್,ತೆಕ್ಕಿಲ್ ಶಾಲಾ ಮುಖ್ಯ ಶಿಕ್ಷಕಿ ವಾಣಿ, ತೆಕ್ಕಿಲ್ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ, ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಸಮಗ್ರ ಪ್ರಶಸ್ತಿಯನ್ನು ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕ, ದ್ವಿತೀಯ ಸವೇರಪುರ ಆಂಗ್ಲಮಾಧ್ಯಮ ಶಾಲೆ, ಹಾಗೂ ಪ್ರೌಢಶಾಲೆ ವಿಭಾಗದಲ್ಲಿ ಸವೇರಪುರ ಆಂಗ್ಲಮಾಧ್ಯಮ ಶಾಲೆ ಪ್ರಥಮ ಸಮಗ್ರ ಪ್ರಶಸ್ತಿ ಹಾಗೂ ಮಾರುತಿ ಪ್ರೌಢಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆಯಿತು. ವೈಯಕ್ತಿಕ ಪ್ರಶಸ್ತಿಯನ್ನು, ಆರ್. ಎಮ್. ಎಸ್. ಎ. ಪ್ರೌಢಶಾಲೆ ಕಲ್ಲುಗುಂಡಿ, ತೆಕ್ಕಿಲ್ ಶಾಲೆ ಗೂನಡ್ಕ, ಸರಕಾರಿ ಶಾಲೆ ಗೂನಡ್ಕ ಪ್ರಶಸ್ತಿ ಪಡೆಯಿತು.ತೆಕ್ಕಿಲ್ ಸಮೂಹ ಸಂಸ್ಥೆಯ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರಹೀಮ್ ಬೀಜದಕಟ್ಟೆ ವಂದಿಸಿದರು. ಕಾಂತಿ ಬಿ. ಎಸ್ ಹಾಗೂ ಕಿಶೋರ್ ಬಿ. ಎಸ್. ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್ ಪಿ. ಆರ್, ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷರಾದ ಕೇಶವ ಬಂಗ್ಲೆಗುಡ್ಡೆ, ಗ್ರಾಮ ಸಹಾಯಕ ಸೋಮನಾಥ್ ಲಯನ್ಸ್ ಕ್ಲಬ್ ಸದಸ್ಯರಾದ ಕಿಶೋರ್ ಕುಮಾರ್, ಸುರೇಶ್ ಮೆಡಿಕಲ್,ಅಂಗವಿಕಲರ ಅದಿಕಾರಿ ಸುಬ್ರಮಣಿ, ಮಾಜಿ ಮಂಡಲ ಸದಸ್ಯರಾದ ಉಮ್ಮರ್ ಹಾಜಿ, ಸಿದ್ದಿಕ್ ಕೊಕ್ಕೋ,ಪಂಚಾಯತ್ ಸಿಬ್ಬಂದಿಗಳಾದ ಸವಿತಾ ಕಿಶೋರ್, ಹರ್ಷಿತ್, ಭರತ್, ಭೋಜಪ್ಪ, ಉಮೇಶ್, ಗುರುವಪ್ಪ, ಸಲೀಂ ಪೆರುಂಗೋಡಿ, ಉಬೈಸ್ ಗೂನಡ್ಕ ವಿವಿಧ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಅಧ್ಯಾಪಕ ವೃoದಾ, ಸ್ತ್ರೀ ಶಕ್ತಿ ಸದಸ್ಯರು, ಆಶಾ ಕಾರ್ಯಕರ್ತರು, ಧರ್ಮಸ್ಥಳ ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು