ಮಂಗಳೂರು: ಜಿಲ್ಲೆಯ ಖೇಲೋ ಇಂಡಿಯಾ ಕೇಂದ್ರದಲ್ಲಿ ಅಥ್ಲೆಟಿಕ್ಸ್ ಕ್ರೀಡೆಯಲ್ಲಿ ವೈಜ್ಞಾನಿಕ ತರಬೇತಿ ಪಡೆಯಲು ಇಚ್ಚಿಸುವ 30 ಪ್ರತಿಭಾವಂತ ಕ್ರೀಡಾಪಟುಗಳನ್ನು ಆಯ್ಕೆ ಮಾಡಲು ಇದೇ ಅ.26ರ ಬೆಳಿಗ್ಗೆ 10 ಗಂಟೆಗೆ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ
ನಡೆಯಲಿದೆ.ಜಿಲ್ಲೆಯ 12 ರಿಂದ 18 ವರ್ಷ ವಯೋಮಾನದ ಬಾಲಕ, ಬಾಲಕಿಯರು ತಮ್ಮ ಜನ್ಮ ದೃಢೀಕರಣ ಪತ್ರ (ಶಾಲೆ, ಕಾಲೇಜು ಮುಖ್ಯಸ್ಥರಿಂದ ದೃಢೀಕೃತ) ಹಾಗೂ ಕ್ರೀಡಾ ಸಾಧನೆಯ ಪ್ರಮಾಣ ಪತ್ರಗಳೊಂದಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ.
ಕ್ರೀಡಾ ಸಮವಸ್ತ್ರ ಕಡ್ಡಾಯ. ಅಥ್ಲೆಟಿಕ್ಸ್ ಕ್ರೀಡೆಯ ಟ್ರ್ಯಾಕ್ ಮತ್ತು ಫೀಲ್ಡ್ ವಿಭಾಗಗಳಲ್ಲಿ ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ನಗರದ ಲೇಡಿಹಿಲ್‍ನಲ್ಲಿರುವ ಮಂಗಳಾ ಕ್ರೀಡಾಂಗಣದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿ ಅಥವಾ ದೂ.ಸಂಖ್ಯೆ:0824-2451264 ಅನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.