ಕಲ್ಲಪಳ್ಳಿ:ನೆಹರೂ ಯುವ ಕೇಂದ್ರ ಕಾಸರಗೋಡು, ಆದರ್ಶ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ ಪೆರುಮುಂಡ ಕಲ್ಲಪಳ್ಳಿ ಹಾಗೂ ಆದರ್ಶ ಮಹಿಳಾ ಸಂಘ ಪೆರುಮುಂಡ-ಕಲ್ಲಪ್ಪಳ್ಳಿ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ “ಗದ್ದೆಲೀ ಒಂದು ದಿನ”
ಸಾರ್ವಜನಿಕ ಕೆಸರು ಗದ್ದೆಯಲ್ಲಿ ವಿವಿಧ
ಕ್ರೀಡಾ ಸ್ಪರ್ಧೆಗಳು ಪಿ.ಎಲ್ ಪರಮೇಶ್ವರ ಗೌಡ ಪೆರುಮುಂಡ ಅವರ ಗದ್ದೆಯಲ್ಲಿ ನಡೆಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕಿಶೋರ್ ಕುಮಾರ್ ಪಿ.ಎಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಳ್ಕರ್, ಪನತ್ತಡಿ ಗ್ರಾ.ಪಂ ಸದಸ್ಯ ರಾಧಾಕೃಷ್ಣ ಗೌಡ ಕಲ್ಲಪಳ್ಳಿ, ಪತ್ರಕರ್ತೆ ಪೂಜಾಶ್ರೀ ವಿತೇಶ್ ಕೋಡಿ, ಆದರ್ಶ ಮಹಿಳಾ ಸಂಘದ ಅಧ್ಯಕ್ಷೆ ಪುಷ್ಪಾ ಪಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದು, ಶುಭ ಹಾರೈಸಿದರು. ವಿಜೇತರಿಗೆ ಅತಿಥಿಗಳು ಬಹುಮಾನ ವಿತರಿಸಿದರು. ದಾಮೋದರ.ಪಿ. ಡಿ ಸ್ವಾಗತಿಸಿ, ಜಯಪ್ರಕಾಶ್ ಪೆರುಮುಂಡ ವಂದಿಸಿದರು. ರಮೇಶ್ ಪಿ. ಕೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರು, ಪ್ರಗತಿಪರ ಕೃಷಿಕರಾದ ಪಿ.ಎ ಬಾಲಕೃಷ್ಣ ನಾಯ್ಕ ಪಾಡಿಕೊಚ್ಚಿ ನೆರವೇರಿಸಿದರು. ಕ್ರೀಡಾಕೂಟಕ್ಕೆ ಪಂಚಾಯತ್ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ಕೃಷಿಕ ಪರಮೇಶ್ವರ ಗೌಡ ಪಿಎಲ್ ಪೆರುಮುಂಡ ಚಾಲನೆ ನೀಡಿದರು. ಬಳಿಕ ವಿವಿಧ ಸ್ಪರ್ಧೆಗಳು ನಡೆಯಿತು.





