ಸುಳ್ಯ: ಸುಳ್ಯ ನಗರದ ಕೇರ್ಪಳ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ. ಕೇರ್ಪಳದ ದುರ್ಗಾ ಪರಮೇಶ್ವರಿ ಕಲಾ ಮಂದಿರದ ಬಳಿಯಲ್ಲಿ ನ.11 ರಂದು ಸಂಜೆ ಕಾಮಗಾರಿ ಆರಂಭಗೊಂಡಿದೆ. ಶಾಸಕರ ವಿಶೇಷ ಅನುದಾನ 40 ಲಕ್ಷ ರೂ ಮೊತ್ತದಲ್ಲಿ ಕೇರ್ಪಳ ಮತ್ತು ಜಟ್ಟಿಪಳ್ಳದಲ್ಲಿ ಒಟ್ಟು 610 ಮೀಟರ್ ಕಾಂಕ್ರೀಟ್ ರಸ್ತೆ ಕಾಮಗಾರಿ ನಡೆಯಲಿದೆ.ಕೇರ್ಪಳದಲ್ಲಿ 20 ಲಕ್ಷ ಮೊತ್ತದಲ್ಲಿ 305 ಮೀಟರ್
ಕಾಮಗಾರಿ ನಡೆಯಲಿದೆ. ದುರ್ಗಾಪರಮೇಶ್ವರಿ ಕಲಾ ಮಂದಿರದಿಂದ 65 ಮೀಟರ್ ಕಾಂಕ್ರೀಟೀಕರಣ, ಅಂಗಡಿ ಮಠ ಅಡ್ಡರಸ್ತೆಯಿಂದ ಹೊಳೆಯ ಬದಿಯ ರಸ್ತೆಯಲ್ಲಿ 170 ಮೀಟರ್, ಕೇರ್ಪಳ ಬಂಟ್ಸ್ ಹಾಸ್ಟೇಲ್ ಬಳಿಯಿಂದ ಅಂಗಡಿ ಮಠದವರೆಗೆ 70 ಮೀಟರ್ ಕಾಂಕ್ರೀಟೀಕರಣ ನಡೆಯಲಿದೆ. 20 ಲಕ್ಷದಲ್ಲಿ ಜಟ್ಟಿಪಳ್ಳ ಮುಖ್ಯರಸ್ತೆ 305 ಮೀಟರ್ ಕಾಂಕ್ರೀಟೀಕರಣ ನಡೆಯಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ. ಕೇರ್ಪಳದಲ್ಲಿ ಇಂದು ಸಂಜೆ ಕಾಂಕ್ರೀಟ್ ಕಾಮಗಾರಿ ಆರಂಭಗೊಂಡಿದ್ದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ.ನಾಮ ನಿರ್ದೇಶಿತ ಸದಸ್ಯ ಬೂಡು ರಾಧಾಕೃಷ್ಣ ರೈ, ಬಿಜೆಪಿ ಯುವಮೋರ್ಚಾ ಮಂಡಲ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ, ಲಕ್ಷ್ಮಣ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.

ನಗರೋತ್ಥಾನ ಯೋಜನೆಯಲ್ಲಿ 2.86 ಕೋಟಿ ಟೆಂಡರ್:
ನಗರೋತ್ಥಾನ ಯೋಜನೆಯಲ್ಲಿ 2.86 ಕೋಟಿ ರೂ ವೆಚ್ಚದಲ್ಲಿ ವಿವಿಧ ರಸ್ತೆಗಳ ಡಾಮರೀಕರಣ, ಕಾಂಕ್ರೀಟೀಕರಣ, ಚರಂಡಿ ದುರಸ್ತಿ ಕಾರ್ಯ ನಡೆಯಲಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪೂರ್ತಿಯಾಗಿದೆ. ಈ ತಿಂಗಳ ಕೊನೆಯಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಹೇಳಿದ್ದಾರೆ. ಕೇರ್ಪಳ ಭಗವತಿ ದೇವಸ್ಥಾನದ ದ್ವಾರದಿಂದ ಕೇರ್ಪಳ ಕಟ್ಟೆಯವರೆಗಿನ ರಸ್ತೆ, ಕಾನತ್ತಿಲ ರಸ್ತೆ, ನಾವೂರು ರಸ್ತೆ, ಕೊಯಿಕುಳಿ ರಸ್ತೆ,ಬೀರಮಂಗಲ ರಸ್ತೆ, ಪರಿವಾರಕಾನ ರಸ್ತೆ, ಭಸ್ಮಡ್ಕ-ಕುಂತಿನಡ್ಕ ರಸ್ತೆ ಸೇರಿ ವಿವಿಧ ರಸ್ತೆಗಳು ಅಭಿವೃದ್ಧಿ ಕಾಣಲಿದೆ ಎಂದು ವಿನಯಕುಮಾರ್ ಕಂದಡ್ಕ ತಿಳಿಸಿದ್ದಾರೆ.