ಕೇರ್ಪಡ:ಕಡಬ ತಾಲೂಕಿನ ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು ಜ.1ರಿಂದ ಆರಂಭಗೊಂಡಿದ್ದು ಜ.3 ರಂದು ಸಂಜೆ ಪವಿತ್ರ ತೀರ್ಥಕೆರೆ ಮತ್ತು ತೀರ್ಥಬಾವಿ ಲೋಕಾರ್ಪಣೆ, ಗಂಗಾ ಪೂಜೆ, ದೀಪೋತ್ಸವ ಮತ್ತು
ಗೋಪೂಜೆ ನಡೆಯಿತು.ಸಾದ್ವಿ ಶ್ರೀ ಮಾತಾನಂದಮಯಿ,
ಶಾಸಕಿ ಭಾಗೀರಥಿ ಮುರುಳ್ಯ, ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ವಸಂತ ನಡುಬೈಲು, ಖ್ಯಾತ ವಾಗ್ಮಿ
ಹಾರಿಕಾ ಮಂಜುನಾಥ್ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಸುಮಾರು 70 ಲಕ್ಷ ರೂ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳು ನೆರವೇರಿದೆ. ಸುಮಾರು 30 ಲಕ್ಷ ರೂ ವೆಚ್ಚದಲ್ಲಿ ಪವಿತ್ರ ತೀರ್ಥಕೆರೆ, ತೀರ್ಥಭಾವಿ ನಿರ್ಮಾಣಗೊಂಡಿದೆ.