ಕೇರ್ಪಡ:ಮಕ್ಕಳಿಗೆ ಸಂಸ್ಕಾರದ ಮತ್ತು ಧಾರ್ಮಿಕ ಶಿಕ್ಷಣ ಇಂದು ಅತೀ ಅಗತ್ಯ. ಕೇರ್ಪಡದ ದೇವಾಲಯದ ಮೂಲಕ ಮಕ್ಕಳಿಗೆ ಸಂಸ್ಕಾರದ ಶಿಕ್ಷಣ ನೀಡುತ್ತಿರುವುದು ಇಲ್ಲಿನ ಹೆಗ್ಗಳಿಕೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಸಾದ್ವಿ ಶ್ರೀ ಮಾತಾನಂದಮಯಿ ಹೇಳಿದರು. ಕೇರ್ಪಡ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ಜ. 3ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಧರ್ಮ,ತ್ಯಾಗ,ಸೇವೆ ಭಾರತದ ಜೀವ ಸತ್ವ.ಸನಾತನ ಸಂಸ್ಕೃತಿ ನಮ್ಮ
ತಾಯಿ ಬೇರಾದರೆ, ಧರ್ಮವೆಂಬುದು ಕಾಂಡ. ಆದುದರಿಂದ ಧರ್ಮದ ಹಾದಿಯಲ್ಲಿ ಜೀವನ ವೃಕ್ಷ ಬೆಳೆಯುತ್ತದೆ. ಆದುದರಿಂದ ಜೀವನದಲ್ಲಿ ಧರ್ಮದ ಆಚರಣೆ ಬಹು ಮುಖ್ಯ ಎಂದು ಹೇಳಿದರು.
‘ಭಾರತೀಯ ಕುಟುಂಬ ಪದ್ಧತಿಗಳು ಮತ್ತು ಜಾಗೃತ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ’ ಎಂಬ ವಿಷಯದಲ್ಲಿ
ಧಾರ್ಮಿಕ ಉಪನ್ಯಾಸ ನೀಡಿದ ವಾಗ್ಮಿ ಹಾರಿಕಾ ಮಂಜುನಾಥ್
ಹಿಂದುಗಳು ಜಾತಿ, ರಾಜಕೀಯದ ಎಲ್ಲೆಯಯನ್ನು ಮೀರಿ ನೈಜ ಹಿಂದುವಾಗಬೇಕು ಆಗ ಮಾತ್ರ ಹಿಂದೂ ಧರ್ಮದ ರಕ್ಷಣೆ ಸಾಧ್ಯ ಎಂದು ಹೇಳಿದರು. ಧರ್ಮ ರಕ್ಷಣೆಗೆ ಸಂಘಟಿತರಾಗಬೇಕು ಮತ್ತು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡಬೇಕು ಎಂದು ಹೇಳಿದರು.
ಸಂಘಟನೆಗೆ ಭಜನೆ ಉತ್ತಮ ಮಾರ್ಗ, ಭಜನೆಯ ಮೂಲಕ ಧರ್ಮ ಬೋಧನೆಯಾಗಬೇಕು ಎಂದು ಹೇಳಿದರು. ಧರ್ಮಜಾಗೃತಿಯ ಮೂಲಕ ದೇಶದ ಜಾಗೃತಿಯಾಗಬೇಕು. ಕುಟುಂಬ ಮೌಲ್ಯಗಳ ಮೂಲಕ ಮನೆಯನ್ನೂ, ಸಮಾಜವನ್ನೂ, ದೇಶವನ್ನು ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಖ್ಯಾತ ಮಕ್ಕಳ ತಜ್ಞೆ ಡಾ.ಪದ್ಮಪ್ರಕಾಶ್, ಸುಳ್ಯ ತಹಶೀಲ್ದಾರ್ ಎಂ. ಮಂಜುಳಾ, ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜು ಆಡಳಿತ ಮಂಡಳಿ ಸದಸ್ಯೆ ಇಂದಿರಾ ಬಿ.ಕೆ., ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿಂತಿಕಲ್ಲು ವಲಯ ಮೇಲ್ವಿಚಾರಕಿ ಹೇಮಲತಾ, ಮುರುಳ್ಯ ಎಣ್ಮೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷೆ ಕೆ.ಜಿ. ಕುಸುಮಾತಿ ರೈ, ಮುರುಳ್ಯ ಗ್ರಾ.ಪಂ. ಅಧ್ಯಕ್ಷೆ ವನಿತಾ ಸುವರ್ಣ ಬಾಮೂಲೆ, ಎಡಮಂಗಲ ಗ್ರಾ.ಪಂ. ಉಪಾಧ್ಯಕ್ಷೆ ದಿವ್ಯಾ ಯೋಗಾನಂದ, ಎಡಮಂಗಲ ಗ್ರಾ.ಪಂ. ಪಿ.ಡಿ.ಒ. ಭವ್ಯಾ ಎಂ.ಬಿ. ಮುಖ್ಯ ಅತಿಥಿಗಳಾಗಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಭಾಗ್ಯಪ್ರಸನ್ನ ಎಣ್ಮೂರು, ವಾರಿಜಾಕ್ಷಿ ಕೇರ್ಪಡ ಉಪಸ್ಥಿತರಿದ್ದರು.
ಅಂಬಾರಿ ಕ್ರಿಯೇಷನ್ನ ಕೇರ್ಪಡದ ಅರಸಿ ಎಂಬ ತುಳು ಭಕ್ತಿಗೀತೆಯನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ತೃಷಾ ಪ್ರಾರ್ಥಿಸಿದರು. ಭಾಗ್ಯಪ್ರಸನ್ನ ಸ್ವಾಗತಿಸಿ, ದಿವ್ಯಾ ಯೋಗಾನಂದ ವಂದಿಸಿದರು. ಮಧು ಯತೀಶ್ ಕಾರ್ಯಕ್ರಮ ನಿರೂಪಿಸಿದರು.