ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡ ಗ್ರಾಮದ ಕೆರೆಯೊಂದರಲ್ಲಿ ಬಿದ್ದಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಣೆ ಮಾಡಿದ್ದಾರೆ.ಇಲ್ಲಿನ ಎಸ್ಟೇಟ್ವೊಂದರಲ್ಲಿದ್ದ
ಕೆರೆಗೆ ನೀರು ಕುಡಿಯಲು ಬಂದ ಸುಮಾರು 25 ವರ್ಷ ವಯಸ್ಸಿನ ಕಾಡಾನೆ ಕೆರೆಗೆ ಜಾರಿ ಬಿದ್ದು ದಡಕ್ಕೆ ಬರಲಾಗದೇ ಪರಿತಪಿಸುತ್ತಿತ್ತು. ಇದನ್ನು ಗಮನಿಸಿದ ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಇಡೀ ದಿನ ಕೆರೆಯಲ್ಲಿ ಸಿಲುಕಿದ ಕಾಡಾನೆ ಹೊರ ಬರಲಾಗದೆ ಯಾತನೆ ಅನುಭವಿಸಿತು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಹೊರ ಬರಲು ಆನೆಗೆ ದಾರಿ ಮಾಡಿದರು. ನಂತರ, ಆನೆಯು ಕೆರೆಯಿಂದ ಹೊರಕ್ಕೆ ಬಂದಿತು.