ತಿರುವನಂತಪುರಂ:ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಹೊರ ಬಿದ್ದಿದ್ದು ವಿವಿಧೆಡೆ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮುನ್ನಡೆ ಪಡೆದಿದೆ. ರಾಜ್ಯದ ಚುನಾವಣಾ ಫಲಿತಾಂಶ ಇಲ್ಲಿದೆ. ರಾಜ್ಯದ 941 ಗ್ರಾಮ ಪಂಚಾಯತ್ಗಳ ಪೈಕಿ ಕಾಂಗ್ರೆಸ್ ನೇತೃತ್ವದ
ಯುಡಿಎಫ್ 504 ಪಂಚಾಯತ್ಗಳಲ್ಲಿ ಬಹುಮತ ಪಡೆದರೆ, ಸಿಪಿಐಎಂ ನೇತೃತ್ವದ ಎಲ್ಡಿಎಫ್ 341 ಗ್ರಾಮ ಪಂಚಾಯತ್ಗಳಲ್ಲಿ ಬಹುಮತ ಪಡೆದರೆ, ಬಿಜೆಪಿ ನೇತೃತ್ವದ ಎನ್ಡಿಎ 26 ಪಂಚಾಯತ್ಗಳಲ್ಲಿ ಬಹುಮತ ಪಡೆದಿದೆ. 64 ಕಡೆಗಳಲ್ಲಿ ಟೈ ಅದರೆ, 6 ಪಂಚಾಯತ್ಗಳಲ್ಲಿ ಇತರರು ಬಹುಮತ ಪಡೆದರು.
152 ಬ್ಲಾಕ್ ಪಂಚಾಯತ್ಗಳಲ್ಲಿ ಯುಡಿಎಫ್ 79, ಎಲ್ಡಿಎಫ್ 63 ಕಡೆ ಬಹುಮತ ಪಡೆದಿದೆ. 10 ಬ್ಲಾಕ್ಗಳಲ್ಲಿ ಟೈ ಆಗಿದೆ.
14 ಜಿಲ್ಲಾ ಪಂಚಾಯತ್ಗಳಲ್ಲಿ ಯುಡಿಎಫ್, ಎಲ್ಡಿಎಫ್ ತಲಾ 7ರಲ್ಲಿ ಬಹುಮತ ಪಡೆದಿದೆ. ತಿರುವನಂತಪುರಂ, ಕೊಲ್ಲಂ, ಆಲಪುಳ, ತ್ರಿಶೂರ್, ಪಾಲಕ್ಕಾಡ್, ಕಣ್ಣೂರ್, ಕಾಸರಗೋಡು ಜಿಲ್ಲೆಯಲ್ಲಿ
ಎಲ್ಡಿಎಫ್ ಮತ್ತು ಪತ್ತನಂತಿಟ್ಟ, ಕೋಟಯಂ, ಇಡುಕ್ಕಿ, ಎರಣಾಕುಳಂ, ಮಲಪ್ಪುರಂ, ಕೋಯಿಕ್ಕೋಡ್,ವಯನಾಡ್ ಜಿಲ್ಲಾ ಪಂಚಾಯತ್ ಯುಡಿಎಫ್ ಪಾಲಾಗಿದೆ.
86 ನಗರ ಸಭೆಗಳಲ್ಲಿ ಯುಡಿಎಫ್ 54, ಎಲ್ಡಿಎಫ್ 28, ಎನ್ಡಿಎ 2 , ಒಂದು ಕಡೆ ಇತರರು ಬಹುಮತ ಪಡೆದರೆ ಒಂದು ಕಡೆ ಟೈ ಆಗಿದೆ.
6 ಮಹಾನಗರ ಪಾಲಿಕೆ(ಕಾರ್ಪೊರೇಷನ್)ಯಲ್ಲಿ 4 ಯುಡಿಎಫ್ ಮತ್ತು ಎಲ್ಡಿಎಫ್ ಹಾಗೂ ಎನ್ಡಿಎ ತಲಾ ಒಂದು ಕಾರ್ಪೊರೇಷನ್ನಲ್ಲಿ ಬಹುಮತ ಪಡೆದಿದೆ. ತಿರುವನಂತಪುರಂ ಕಾರ್ಪೊರೇಷನ್ನಲ್ಲಿ ಎನ್ಡಿಎ ಬಹುಮತ ಪಡೆದರೆ, ಕೊಲ್ಲಂ, ಕೊಚ್ಚಿ, ತ್ರಿಶೂರ್, ಕಣ್ಣೂರು ಕಾರ್ಪೊರೇಷನ್ನಲ್ಲಿ ಯುಡಿಎಫ್ ಬಹುಮತ ಪಡೆದಿದೆ. ಕೋಯಿಕ್ಕೋಡ್ ಕಾರ್ಪೊರೇಷನ್ ಎಲ್ಡಿಎಫ್ ಪಾಲಾಗಿದೆ.













