ತಿರುವನಂತಪುರಂ: ಕೇರಳ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಿಸಲಾಗಿದೆ. ಡಿಸೆಂಬರ್ 9 ಮತ್ತು 11 ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಡಿ.13ರಂದು ಮತ ಎಣಿಕೆ ನಡೆಯಲಿದೆ. ಒಟ್ಟು 1200 ಸ್ಥಳೀಯ ಸಂಸ್ಥೆಗಳ
23,612 ವಾರ್ಡ್ಗಳಿಗೆ ಚುನಾವಣೆ ನಡೆಯಲಿದೆ. ತಿರುವನಂತಪುರಂ, ಕೊಲ್ಲಂ ಪತ್ತನಂತಿಟ್ಟ, ಆಲಪ್ಪುಯ, ಕೋಟಯಂ, ಇಡುಕ್ಕಿ,ಎರಣಾಕುಳಂ ಜಿಲ್ಲೆಗಳಲ್ಲಿ ಡಿ.9ರಂದು ಚುನಾವಣೆ ನಡೆಯಲಿದೆ. ತ್ರಿಶೂ್ರ್, ವಯನಾಡ್, ಪಾಲಕ್ಕಾಡ್, ಕೋಝಿಕ್ಕೋಡ್, ಮಲಪ್ಪುರಂ, ಕಣ್ಣೂರ್, ಕಾಸರಗೋಡು ಜಿಲ್ಲೆಗಳಲ್ಲಿ ಡಿ.11 ರಂದು ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ನ.21ಕೊನೆಯ ದಿನ, 22 ರಂದು ಪರಿಶೀಲನೆ ನಡೆಯಲಿದೆ. ನ.24ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. 941 ಗ್ರಾಮ ಪಂಚಾಯತ್, 152 ಬ್ಲಾಕ್ ಪಂಚಾಯತ್, 14 ಜಿಲ್ಲಾ ಪಂಚಾಯತ್, 86 ನಗರ ಸಭೆ, 6 ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆಯಲಿದೆ.












