ಸುಳ್ಯ: ಜೂ.25ರಿಂದ ಸುಳ್ಯ-ಪಾಣತ್ತೂರು- ಕಾಞಂಗಾಡ್ ಅಂತಾರಾಜ್ಯ ರಸ್ತೆಯಲ್ಲಿ ಕೇರಳ ಸಾರಿಗೆ ಸಂಸ್ಥೆಯ ಮತ್ತೊಂದು ಬಸ್ ಸರ್ವೀಸ್ ಆರಂಭಗೊಳ್ಳಲಿದೆ.ಸಂಜೆ 3.10ಕ್ಕೆ ಪಾಣತ್ತೂರಿನಿಂದ ಹೊರಡುವ ಬಸ್ 4.10ಕ್ಕೆ ಸುಳ್ಯಕ್ಕೆ ಬಂದು 4.35ಕ್ಕೆ ಸುಳ್ಯದಿಂದ ಹೊರಟು 5.35ಕ್ಕೆ ಪಾಣತ್ತೂರು ತಲುಪಲಿದೆ. ಈಗ ಬೆಳಿಗ್ಗೆ ಮಾತ್ರ ಒಂದು ಬಸ್ ಸರ್ವೀಸ್ ನಡೆಸುತ್ತಾ ಇದೆ. ಬೆಳಿಗ್ಗೆ 7.20ಕ್ಕೆ ಪಾಣತ್ತೂರಿನಿಂದ ಹೊರಟು
8.20 ಸುಳ್ಯಕ್ಕೆ ಬಂದು, ಸುಳ್ಯದಿಂದ 8.45 ಕ್ಕೆ ಹೊರಟು 9.55 ಕ್ಕೆ ಪಾಣತ್ತೂರು ತಲುಪುತಿದೆ.2016 ಸೆಪ್ಟೆಂಬರ್ 25ರಂದು ಕಾಞಂಗಾಡು-ಪಾಣತ್ತೂರು-ಸುಳ್ಯ ಮಾರ್ಗದಲ್ಲಿ ಕೆಎಸ್ಆರ್ಟಿಸಿ ಅಂತಾರಾಜ್ಯ ಮಾರ್ಗದಲ್ಲಿ ಐದು ಬಸ್ಗಳ ಪ್ರಯಾಣ ಆರಂಭಗೊಂಡಿತ್ತು. ಪಾಣತ್ತೂರು-ಸುಳ್ಯ ರಸ್ತೆ ಹದಗೆಟ್ಟಿದ್ದರಿಂದ ಕೆಲವು ಬಸ್ಸು ಗಳು ಪಾಣತ್ತೂರು ತನಕ ಮಾತ್ರ ಸರ್ವೀಸ್ ನಡೆಸಲಾಗುತ್ತಿತ್ತು. ಎರಡು ಬಸ್ಗಳು ಮಾತ್ರ ಸುಳ್ಯ ತನಕ ಬರುತ್ತಿತ್ತು. ಬಳಿಕ ಕೋವಿಡ್ ಸಂದರ್ಭದಲ್ಲಿ ಅಂತಾರಾಜ್ಯ ರಸ್ತೆಯಲ್ಲಿ ಬಸ್ಗಳ ಓಡಾಟ ಸ್ಥಗಿತಗೊಂಡಿತ್ತು.
ಬಳಿಕ ಎರಡು ಬಸ್ ಸರ್ವೀಸ್ ಆರಂಭಿಸಿದರೂ ಒಂದು ಬಸ್ ಓಡಾಟ ನಿಲ್ಲಿಸಿತು. ಇದೀಗ ರಸ್ತೆ ಸಂಚಾರ ಯೋಗ್ಯವಾಗಿದೆ, ಎಲ್ಲಾ ಐದು ಬಸ್ಗಳು ಓಡಾಟ ಆರಂಭಿಸಬೇಕು ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ನೇತೃತ್ವದಲ್ಲಿ ಸಂಬಂಧಪಟ್ಟವರನ್ನು ಒತ್ತಾಯಿಸಿದ ಮೇರೆಗೆ ಮತ್ತೊಂದು ಬಸ್ ಆರಂಭವಾಗುತಿದೆ. ಸುಳ್ಯ-ಕಾಂಞಂಗಾಡ್ ಮಾರ್ಗದಲ್ಲಿ ಮಂಜೂರಾದ ಬಸ್ಗಳು ಈಗ ಬೇರೆ ಮಾರ್ಗಗಳಲ್ಲಿ ಓಡುತ್ತಿವೆ. ಸುಳ್ಯ ಮಾರ್ಗವಾಗಿ ಓಡುವ ಐದು ಬಸ್ಸುಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಲಾಗಿದೆ. ಈ ಹಿನ್ನಲೆಯಲ್ಲಿ ಸಂಜೆಯ ವೇಳೆಗೆ ಇನ್ನೊಂದು ಬಸ್ ಆರಂಭಗೊಳ್ಳಲಿದೆ. ಉಳಿದ ಮೂರು ಸರ್ವಿಸ್ಗಳು ಕೂಡ ಪುನರಾರಂಭಿಸಬೇಕು
ಎಂದು ಸಾರಿಗೆ ಸಚಿವರಲ್ಲಿ ಮನವಿ ಮಾಡಲಾಗಿದೆ
ಹಂತ ಹಂತವಾಗಿ ಎಲ್ಲಾ ಐದು ಬಸ್ಸುಗಳು ಓಡಾಟ ಅರಂಭಿಸುವ ನಿರೀಕ್ಷೆ ಇದೆ ಎಂದು ಅರುಣ್ ರಂಗತ್ತಮಲೆ ಹೇಳಿದ್ದಾರೆ.