ಮಲಪ್ಪುರಂ:ಕೇರಳ ವಿಧಾನಸಭಾ ಚುನಾವಣೆಗೆ ಯುಡಿಎಫ್ ನ ಭಾಗವಾಗಿರುವ ಮುಸ್ಲಿಂ ಲೀಗ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮಂಜೇಶ್ವರದಲ್ಲಿ ಹಾಲಿ ಶಾಸಕ ಎ.ಕೆ.ಎಂ.ಅಶ್ರಫ್ ಅವರಿಗೆ ಮತ್ತೆ ಟಿಕೆಟ್ ನೀಡಲಾಗಿದೆ. ಕಾಸರಗೋಡು ಕ್ಷೇತ್ರದಿಂದ
ಕಲ್ಲಟ್ರ ಮಾಯಿನ್ ಹಾಜಿ ಅಭ್ಯರ್ಥಿಯಾಗಿದ್ದಾರೆ. ಪಿ.ಕೆ.ಕುಂಞಾಲಿಕುಟ್ಟಿ ಮಲಪ್ಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಆರೋಗ್ಯ ಸಮಸ್ಯೆಯ ಕಾರಣದಿಂದ ಹಿರಿಯ ಮುಖಂಡ ಎಂ.ಕೆ.ಮುನೀರ್ ಈ ಬಾರಿ ಸ್ಪರ್ಧಿಸುತ್ತಿಲ್ಲ. ವೇಙರ ಕ್ಷೇತ್ರದಲ್ಲಿ ಕೆ.ಎಂ.ಶಾಜಿ ಅಭ್ಯರ್ಥಿಯಾಗಲಿದ್ದಾರೆ.












