ತಿರುವನಂತಪುರಂ: ಕೇರಳದಲ್ಲಿ ಚುನಾವಣಾ ಘೋಷಣೆ ಆದ ಬೆನ್ನಲ್ಲೇ ಕೇರಳದ ಆಡಳಿತಾರೂಢ ಎಡರಂಗ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಎಡರಂಗದ ಮುಖ್ಯ ಪಕ್ಷವಾದ ಸಿಪಿಐಎಂ 86 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. 56 ಮಂದಿ

ಸಿ.ಎಚ್.ಕುಂಞಂಬು, ಕೆ.ಆರ್.ಜಯಾನಂದ, ಗೋವಿಂದನ್ ಪಳ್ಳಿಕ್ಕಾಪ್ಪಿಲ್ ವಿ.ಪಿ.ಪಿ.ಮುಸ್ತಫ
ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಣ್ಣೂರು ಜಿಲ್ಲೆಯ ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಪೇರಾವೂರ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಕೆ.ಆರ್.ಜಯಾನಂದ, ಉದುಮ ಕ್ಷೇತ್ರದಲ್ಲಿ ಸಿ.ಎಚ್.ಕುಂಞಂಬು, ತ್ರಿಕ್ಕರಿಪುರ ಕ್ಷೇತ್ರದಿಂದ ವಿ.ಪಿ.ಪಿ.ಮುಸ್ತಫ ಸ್ಪರ್ಧಿಸಲಿದ್ದಾರೆ.ಎಡರಂಗದ ಎರಡನೇ ದೊಡ್ಡ ಪಕ್ಷವಾದ ಸಿಪಿಐ ಕೂಡ ಅಭ್ಯರ್ಥಿಗಳನ್ನು ಘೋಷಿಸಿದೆ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ಕ್ಷೇತ್ರದಲ್ಲಿ ಗೋವಿಂದನ್ ಪಳ್ಳಿಕ್ಕಾಪ್ಪಿಲ್ ಅಭ್ಯರ್ಥಿಯಾಗಿದ್ದಾರೆ.












