ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೊದಲ ಹಂತದಲ್ಲಿ 55 ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ವಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು
ಪರವೂರು ಕ್ಷೇತ್ರದಿಂದ, ರಮೇಶ್ ಚೆನ್ನಿತಲ ಹರಿಪಾಡ್ ಕ್ಷೇತ್ರದಿಂದ, ಕೆಪಿಸಿಸಿ ಅಧ್ಯಕ್ಷ ಸಣ್ಣಿ ಜೋಸೆಫ್ ಪೇರಾವೂರಿನಿಂದ, ಕೆ.ಮುರಳೀಧರನ್ ವಟ್ಟಿಯೂರ್ಕಾವ್ನಿಂದ ಸ್ಪರ್ಧಿಸಲಿದ್ದಾರೆ. ಪಾಲಕಾಡ್ ಕ್ಷೇತ್ರದಿಂದ ಚಲನಚಿತ್ರ ನಟ ರಮೇಶ್ ಪಿಶಾರಡಿ ಅಭ್ಯರ್ಥಿಯಾಗಿದ್ದಾರೆ. ವಿ.ಟಿ.ಬಲರಾಂ ತೃತ್ತಾಲ ಕ್ಷೇತ್ರದಿಂದ, ಬಿಂದು ಕೃಷ್ಣ ಕೊಲ್ಲಂ ಕ್ಷೇತ್ರದಿಂದ, ಟಿ.ಸಿದ್ದಿಕ್ ಕಲ್ಪಟ್ಟ ಕ್ಷೇತ್ತದಿಂದ, ರೋಜಿ ಎಂ.ಜಾನ್ ಅಂಗಮಾಲಿ ಕ್ಷೇತ್ರದಿಂದ, ಪಿ.ಸಿ.ವಿಷ್ಣುನಾಥ್ ಕುಂಡರ, ಚಾಂಡಿ ಉಮ್ಮನ್ ಪುತುಪಳ್ಳಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.
ಕಾಸರಗೋಡು ಜಿಲ್ಲೆಯ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಪ್ರಥಮ ಪಟ್ಟಿಯಲ್ಲಿ ಘೋಷಿಸಲಾಗಿಲ್ಲ.












