ತಿರುವನಂತಪುರಂ: ಕೇರಳ ಸರಕಾರದ ಓಣಂ ಬಂಪರ್ ಲಾಟರಿ ಟಿಕೆಟ್ ಡ್ರಾ ಅ.9ರಂದು ನಡೆಯಿತು. ಇದರ ಅದೃಷ್ಠ ಕನ್ನಡಿಗನಿಗೆ ಒಲಿದಿದೆ. ಮಂಡ್ಯ ಪಾಂಡವಪುರದ ಅಲ್ತಾಫ್ ಎಂಬವರಿಗೆ ಪ್ರಥಮ ಬಹುಮಾನ 25 ಕೋಟಿ ಲಭಿಸಿದೆ. ಇವರು ತೆಗೆದ TG 434222 ನಂಬರಿನ ಟಿಕೆಟ್ಗೆ ಪ್ರಥಮ ಬಹುಮಾನ ಒಲಿದು ಬಂದಿದೆ ಎಂದು ವರದಿಯಾಗಿದೆ. ವಯನಾಡ್ ಜಿಲ್ಲೆಯಲ್ಲಿ
ಮಾರಾಟವಾದ ಟಿಕೆಟ್ಗೆ ಪ್ರಥಮ ಬಹುಮಾನದ ಅದೃಷ್ಠ ಒಲಿದಿದೆ. ಪಾಂಡವಪುರದಲ್ಲಿ ಮೆಕ್ಯಾನಿಕ್ ಆಗುರುವ ಅಲ್ತಾಫ್ ವಯನಾಡಿನ ಸಂಬಂಧಿಕರ ಮನೆಗೆ ಬಂದಿದ್ದ ಸಂದರ್ಭದಲ್ಲಿ ಅವರು ಟಿಕೆಟ್ ಖರೀದಿಸಿದ್ದರು. ವಯನಾಡಿನ ಬತ್ತೇರಿಯಲ್ಲಿ ಮೈಸೂರು ಮೂಲದ ನಾಗರಾಜ್ ಮತ್ತು ಮಂಜುನಾಥ್ ಅವರು ನಡೆಸುವ ಎನ್ಜಿಆರ್ ಲಾಟರಿ ಏಜೆನ್ಸಿಯಿಂದ ಅಲ್ತಾಫ್ ಟಿಕೆಟ್ ಖರೀದಿಸಿದ್ದರು. ಕರ್ನಾಟಕದವರು ಮಾರಾಟ ಮಾಡಿದ ಕೇರಳ ಲಾಟರಿ ಟಿಕೆಟ್ನಲ್ಲಿ ಕರ್ನಾಟಕದವರಿಗೆ ಪ್ರಥಮ ಬಹುಮಾನ ಒಲಿದು ಬಂದಿದೆ ಎಂಬುದು ವಿಶೇಷ. ಅದೃಷ್ಠವಂತ ಯಾರು ಎಂಬ ಕುತೂಹಲ ನಿನ್ನೆಯಿಂದ ಇತ್ತು. ಎರಡನೇ ಬಹುಮಾನ ತಲಾ ಒಂದು ಕೋಟಿ 20 ಮಂದಿಗೆ ಲಭಿಸಲಿದೆ. ಮೂರನೇ ಬಹುಮಾನ ತಲಾ 50 ಲಕ್ಷ 20 ಮಂದಿಗೆ ದೊರೆಯಲಿದೆ. 500 ರೂ ಮುಖ ಬೆಲೆಯ 71.43 ಲಕ್ಷ ಟಿಕೆಟ್ ಈ ಬಾರಿ ಮಾರಾಟ ನಡೆದಿತ್ತು.