ತಿರುವನಂತಪುರ : ಕೇರಳದ ಬಿಜೆಪಿ ರಾಜ್ಯಾಧ್ಯಕ್ಷರಾಗಿ ರಾಜೀವ್ ಚಂದ್ರಶೇಖರನ್ ಅವರನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಅವರು ಸೋಮವಾರ ಅಧಿಕಾರ ಸ್ವೀಕರಿಸಿದರು.ತಿರುವನಂತಪುರದ ಪಕ್ಷದ ಆಸ್ಥಾನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಬಿಜೆಪಿ ಕೇರಳ ಪ್ರಭಾರಿ ಪ್ರಹ್ಲಾದ್ ಜೋಷಿ ಅಧಿಕೃತವಾಗಿ ಅಧ್ಯಕ್ಷರನ್ನು ಘೋಷಿಸಿದರು.
ಕೇಂದ್ರ ಘಟಕದ ನಿರ್ಧಾರವನ್ನು
ಪ್ರಕಾಶ್ ಜಾವ್ಡೇಕರ್ ಕೇರಳ ಬಿಜೆಪಿ ಕಾರ್ಯಕಾರಿಣಿ ಸಭೆಯ ಮುಂದಿಟ್ಟರು. ಅಧ್ಯಕ್ಷ ಪದವಿಗೆ ಬಿಜೆಪಿ ನಾಯಕರೆಲ್ಲರ ಬೆಂಬಲದೊಂದಿಗೆ ನಿನ್ನೆ ರಾಜೀವ್ ಚಂದ್ರಶೇಖರ್ ನಾಮ ಪತ್ರಿಕೆ ಸಲ್ಲಿಸಿದ್ದರು. ಅವಿರೋಧ ಆಯ್ಕೆಯಾದ ಕಾರಣ ಇಂದು ಘೋಷಣೆಯಷ್ಟೇ ಉಳಿದಿತ್ತು.
ಮುಂಬರುವ ಸ್ಥಳೀಯಾಡಳಿತ ಮತ್ತು ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷವನ್ನು ಮುನ್ನಡೆಸುವ ಸಾರಥ್ಯವನ್ನು ರಾಜೀವ್ ಚಂದ್ರಶೇಖರರಿಗಿತ್ತು ಮಾತನ್ನಾಡಿದ ಪ್ರಹ್ಲಾದ್ ಜೋಷಿ ಮುಂಬರುವ ವಿಧಾನ ಸಭಾ ಚುನಾವಣೆ ಕೇರಳದಲ್ಲಿ ಪಕ್ಷದ ಪಾಲಿಗೆ ಅತ್ಯಂತ ನಿರ್ಣಾಯಕವೆಂದೂ, ಅದರಲ್ಲಿ ಪಕ್ಷ ತನ್ನ ಬೆಳವಣಿಗೆಯನ್ನು ಪ್ರಕಟಿಸಿ ಅಧಿಕಾರದತ್ತ ನಡೆಯಬೇಕೆಂದು ಹಾರೈಸಿದರು.
ಅಧ್ಯಕ್ಷ ಪದವಿಯಿಂದ ನಿರ್ಗಮಿಸುವ ನಾಯಕ ಕೆ ಸುರೇಂದ್ರನ್ ಮಾತನಾಡಿ ಕಳೆದ 10 ವರ್ಷದಲ್ಲಿ ಬಿಜೆಪಿ ಸಾಕಷ್ಟು ಬೆಳೆದಿದೆ,ಈಗ ಅಧ್ಯಕ್ಷರಷ್ಟೇ ಬದಲಾಗುತ್ತಾರೆ ವಿನಃ ನಮ್ಮೆಲ್ಲರ ಗುರಿ ಪಕ್ಷವನ್ನು ಅಧಿಕಾರಕ್ಕೇರಿಸುವುದಾಗಿದೆ ಎಂದು ಹೇಳಿದರು. ಎಲ್ಲರ ಸರಕಾರದಲ್ಲಿ ಪಕ್ಷವನ್ನು ಮುನ್ನಡೆಸುವ ವಿಶ್ವಾಸ ಇದೆ, ಪಕ್ಷವನ್ನು ಅಧಿಕಾರಕ್ಕೆ ಎಂದು ನೂತನ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದರು.