ಕೇನ್ಯ:ಫ್ರೆಂಡ್ಸ್ ಕ್ಲಬ್ ಕೇನ್ಯ ಇದರ ಆಶ್ರಯದಲ್ಲಿ 6 ತಂಡಗಳ 12 ಜನರ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಕೆ.ಪಿ.ಎಲ್ ಟ್ರೋಫಿ 2026 ಕೇನ್ಯ ವಿಷ್ಣು ನಗರದ ಮೈದಾನದಲ್ಲಿ ನಡೆಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ
ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರವೀಂದ್ರನಾಥ ಶೆಟ್ಟಿ ಕೇನ್ಯ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಶ್ರೀ ಪರಿವಾರ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಹಾಗೂ ಕ್ಲಬ್ ನ ಹಿರಿಯ ಸಲಹೆಗಾರರು ಬಾಲಕೃಷ್ಣ ರೈ ಬಿರ್ಕಿ, ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ವಿಕೇಶ್ ರೈ ಕೇನ್ಯ,ಯುವ ಜನ ಸಂಯುಕ್ತ ಮಂಡಳಿ ಕ್ರೀಡಾ ಕಾರ್ಯದರ್ಶಿ ಜನಾರ್ದನ ನಾಗತೀರ್ಥ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಜೆ ಸಮಾರೋಪ ಸಮಾರಂಭ ನಡೆಯಿತು.









