ಸುಳ್ಯ:ಶುದ್ಧವಾದ ನೀರು, ವಾಯು ಮನುಷ್ಯನ ಬದುಕಿಗೆ ಮತ್ತು ಉತ್ತಮ ಆರೋಗ್ಯಕ್ಕೆ ಅಡಿಪಾಯ. ಈಗ ಎಲ್ಲೆಡೆ ಶುದ್ಧ ಕುಡಿಯುವ ನೀರಿನದ್ದೇ ಸಮಸ್ಯೆ. ಅದರಲ್ಲೂ ಬೇಸಿಗೆ ಕಾಲ ಬಂತೆಂದರೆ ಎಲ್ಲೆಡೆ ನೀರಿನ ಹಾಹಾಕಾರ ಅರಂಭವಾಗುತ್ತದೆ. ನೀರಿನ ಲಭ್ಯತೆ ಕಡಿಮೆಯಾಗುತ್ತದೆ. ಅದರಲ್ಲೂ ಶುದ್ಧ ಕುಡಿಯುವ ನೀರು ದೊರೆಯುವುದೇ ದೊಡ್ಡ ತಲೆನೋವಾಗಿ ಪರಿಣಮಿಸುತ್ತದೆ. ಇಂತಹಾ ಸಮಸ್ಯೆಗೆ ಪರಿಹಾರವಾಗುವ ಎಲ್ಲಾ ತರಹದ ನೀರಿನ ಶುದ್ಧೀಕರಣ ಘಟಕಗಳ ನಿರ್ಮಾಣ, ನಿರ್ವಹಣೆ, ದುರಸ್ತಿ ಹಾಗೂ

ಮಾರಾಟ ಕ್ಷೇತ್ರದಲ್ಲಿ ಜನಪ್ರಿಯವಾಗಿರುವ ಸಂಸ್ಥೆ ಕೆನ್ಅಯಾನ್(KENION).
ಸುಳ್ಯ ಅಂಬೆಟಡ್ಕ ಕೆವಿಜಿ ಆಯುರ್ವೇದ ಕಾಲೇಜು ಸಮೀಪ ಇರುವ ಕೆಅಯಾನ್ ಸಂಸ್ಥೆ ಇದೀಗ ಮೂರನೇ ವರ್ಷದ ಸಂಭ್ರಮದಲ್ಲಿದೆ.
ಕಳೆದ ಮೂರು ವರ್ಷಗಳಲ್ಲಿ ಹಲವಾರು ಕಡೆಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅಳವಡಿಸಿರುವ ಸಂಸ್ಥೆ ಜನ ಮೆಚ್ಚುಗೆಗೆ ಪಾತ್ರವಾಗಿದೆ.
ಮೂರನೇ ವರ್ಷದಲ್ಲಿ ಜನರಿಗೆ ಇನ್ನಷ್ಟು ಹತ್ತಿರವಾಗುವ ತವಕದಲ್ಲಿದೆ ಕೆನ್ಅಯಾನ್.

ಕೆನ್ಅಯಾನ್ನಲ್ಲಿ ಏನೇನಿದೆ:
ಎಲ್ಲಾ ತರಹದ ನೀರಿನ ಶುದ್ದೀಕರಣ ಘಟಕಗಳ, ನಿರ್ಮಾಣ, ನಿರ್ವಹಣೆ ದುರಸ್ತಿ ಹಾಗೂ ಮಾರಾಟ ಮಾಡಲಾಗುತ್ತದೆ. ಗೃಹೋಪಯೋಗಿ ಕುಡಿಯುವ ನೀರಿನ ಘಟಕಗಳು. ಹೋಟೇಲ್ ಹಾಗೂ ವಾಣಿಜ್ಯೋದಮ ಸಂಬಂಧಿಸಿದ ನೀರಿನ ಶುದ್ದೀಕರಣ ಘಟಕವನ್ನು ಗ್ರಾಹಕರ ಅನೂಕಲಕ್ಕೆ ತಕ್ಕಂತೆ ನಿರ್ಮಾಣ ಮಾಡಿ ಕೊಡಲಾಗುತ್ತದೆ.
ಮಣ್ಣಿನ ಮಿಶ್ರಿತ ನೀರು, ಗಡಸು ನೀರು, ಕಬ್ಬಿಣ ಅಂಶದ ನೀರಿನ ತೊಂದರೆಗಳಿಗೆ ಇವರಲ್ಲಿ ಸಂಪೂರ್ಣ ಪರಿಹಾರವಿದೆ.
ಸಂಪೂರ್ಣ ಮನೆಯ ನೀರಿಗೆ ಶುದ್ದೀಕರಣ ಘಟಕ ಅಳವಡಿಕೆ ಮಾಡಲಾಗುತ್ತದೆ. ಸ್ವಿಮ್ಮಿಂಗ್ ಪೂಲ್ ಫಿಲ್ಟರ್ ಅಳವಡಿಕೆ ಮಾಡಿ ಕೊಡಲಾಗುತ್ತದೆ.
ಒಳಚರಂಡಿ ಹಾಗೂ ತ್ಯಾಜ್ಯಾ ನೀರು (ETP & STP) ಶುದ್ದೀಕರಣದ ಘಟಕಗಳ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಸ್ಟೇಟಸ್ ಹಾಕಿ ಬಹುಮಾನ ಗೆಲ್ಲಿ:
ಮೂರನೇ ವರ್ಷದ ಪ್ರಯುಕ್ತ ಆಕರ್ಷಕ ಬಹುಮಾನ ಗೆಲ್ಲುವ ಸುವರ್ಣ ಅವಕಾಶವನ್ನು ಸಂಸ್ಥೆ ಗ್ರಾಹಕರಿಗಾಗಿ ನೀಡಿದೆ. ಈ ಮೊಬೈಲ್ ಸಂಖ್ಯೆಯನ್ನು 9036405541 KENION ಎಂದು ಸೇವ್ ಮಾಡಿ.
ನಂತರ ಸಂಸ್ಥೆಯ ಮೂರನೇ ವರ್ಷ ಸಂಭ್ರಮದ ಪೋಸ್ಟರನ್ನು ಸ್ಟೇಟಸ್ನಲ್ಲಿ ಅಳವಡಿಸಬೇಕು.ಅತೀ ಹೆಚ್ಚು ವೀಕ್ಷಣೆಯಾದ ಮೇಲೆ ಅದನ್ನು ಸ್ಕ್ರೀನ್ ಶಾಟ್ ತೆಗೆದು ಮೇಲಿನ ಸಂಖ್ಯೆಗೆ ತಮ್ಮ ಹೆಸರಿನೊಂದಿಗೆ

ಕಳುಹಿಸಬೇಕು. ಅತೀ ಹೆಚ್ಚು ವೀಕ್ಷಣೆ ಹೊಂದಿದ ಮೂರು ಜನ ಅದೃಷ್ಟಶಾಲಿಗಳಿಗೆ ಉಚಿತವಾಗಿ ಗೃಹೋಪಯೋಗಿ ಫಿಲ್ಟರ್ ನೀಡಲಾಗುವುದು.ಈ ಮೆಗಾ ಕಂಟೆಸ್ಟ್ಗೆ ನಿಯಮಗಳು ಮತ್ತು ಷರತ್ತುಗಳು ಅನ್ವಯಿಸುತ್ತವೆ- ಮಾರ್ಚ್ 08 ರಿಂದ ಏಪ್ರಿಲ್ 08-2024 ರವರೆಗೆ ಸ್ಪರ್ಧೆ ಚಾಲ್ತಿಯಲ್ಲಿರುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೆನ್ಅಯಾನ್ (KENION)
ಶ್ರೀ ವಿಷ್ಣು ನಾರ್ಕೋಡ್ ಕಾಂಪ್ಲೆಕ್ಸ್
ಕೆ.ವಿ.ಜಿ ಆಯುರ್ವೇದ ಕಾಲೇಜು ಸಮೀಪ.
ಅಂಬೆಟಡ್ಕ.ಸುಳ್ಯ, ದ.ಕ – 574239.
ದೂ.90364 05541
info@kenion.com
www.kenion.in
Head office@Mangalore















