ಸುಳ್ಯ:ನಮ್ಮ ಇತಿಹಾಸದ ಮತ್ತು ಇತಿಹಾಸ ಪುರುಷರ ಪ್ರೇರಣೆಯಿಂದ ನಾವು ನಾಡನ್ನು ಕಟ್ಟುವ ಮೂಲಕ ಇತಿಹಾಸ ಸೃಷ್ಠಿಸಬೇಕು ಎಂದು ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಹೇಳಿದ್ದಾರೆ. ಸುಳ್ಯ ತಾಲೂಕು ಆಡಳಿತ, ಸುಳ್ಯ ನಗರ ಪಂಚಾಯತ್ ನೇತೃತ್ವದಲ್ಲಿ ನಾಡಪ್ರಭು ಕೆಂಪೇ ಗೌಡರ 108 ಅಡಿ ಎತ್ತರದ ಭವ್ಯ ಕಂಚಿನ ಪ್ರತಿಮೆ ‘ಪ್ರಗತಿಯ ಪ್ರತಿಮೆ’ಯ ಅನಾವರಣದ ಹಿನ್ನಲೆಯಲ್ಲಿ ನಡೆಯುತ್ತಿರುವ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ರಥಕ್ಕೆ

ಸ್ವಾಗತ ನೀಡಿ, ಪವಿತ್ರ ಮೃತ್ತಿಕೆ ಅಭಿಯಾನ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ದೇಶಕ್ಕೆ ದೊಡ್ಡ ಇತಿಹಾಸ ಇದೆ. ಹಿರಿಯರು ನಿರ್ಮಿಸಿದ ಇತಿಹಾಸ ನಮ್ಮ ಬದುಕಿಗೆ ಹಿರಿಮೆ ಮತ್ತು ಪ್ರೇರಣೆಯನ್ನು ನೀಡಿದೆ. ಇತಿಹಾಸವನ್ನು ಮರೆಯಬಾರದು. ಆಡಳಿತ ನಡೆಸುವವರು ಸೇರಿದಂತೆ ಎಲ್ಲರೂ ಇತಿಹಾಸವನ್ನು ತಿಳಿದುಕೊಂಡು ಗೌರವ ನೀಡಬೇಕು ಎಂದರು.
ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷರು ಹಾಗು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ನ ಪ್ರಧಾನ ಕಾರ್ಯದರ್ಶಿ ಡಾ.ರೇಣುಕಾಪ್ರಸಾದ್ ಕೆ.ವಿ. ಮಾತನಾಡಿ ‘ಕೆಂಪೇಗೌಡ ಯಾರು ಅವರ ಸಾಧನೆ ಏನು ಎಂಬುದನ್ನು ದೇಶಕ್ಕೆ ತಿಳಿಸಬೇಕು ಎಂಬ ನೆಲೆಯಲ್ಲಿ ಕೆಂಪೇ ಗೌಡ ಅವರ ಪ್ರತಿಮೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗೆ ಸರಕಾರ ಸ್ಪಂದಿಸಿ ಪ್ರತಿಮೆ ನಿರ್ಮಾಣ ಮಾಡಿರುವುದು ಅತ್ಯಂತ ಸಂತಸದ ವಿಚಾರ. ಕೆಂಪೇ ಗೌಡರ ಸಾಧನೆ ಮುಂದಿನ ತಲೆಮಾರಿಗೆ ಪ್ರೇರಣೆಯಾಗಬೇಕುಎಂದು ಹೇಳಿದರು.

ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ತಹಶೀಲ್ದಾರ್ ಅನಿತಾ ಲಕ್ಷ್ಮಿ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಚಂದ್ರಶೇಖರ ಪೇರಾಲು,ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್, ನಗರ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ ಎಂ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಎನ್.ಭವಾನಿಶಂಕರ ಸ್ವಾಗತಿಸಿದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶ್ಮಿ ಎಂ.ಆರ್. ವಂದಿಸಿದರು, ಉಪತಹಶೀಲ್ದಾರ್ ಚಂದ್ರಕಾಂತ್ ಎಂ.ಆರ್ ಹಾಗು ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು.

ಪ್ರಮುಖರಾದ ಹರೀಶ್ ಕಂಜಿಪಿಲಿ, ನಿತ್ಯಾನಂದ ಮುಂಡೋಡಿ, ವೆಂಕಟ್ ವಳಲಂಬೆ, ಕೆವಿಜಿ ಆಯುರ್ವೇದ ಕಾಲೇಜಿನ ಪ್ರಾಂಶುಪಾಲ ಡಾ.ಲೀಲಾಧರ ಡಿ.ವಿ, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಸುರೇಶ್, ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಕಲ್ಲುಗದ್ದೆ , ಪ್ರಮುಖರಾದ ಸಂತೋಷ್ ಜಾಕೆ, ಚನಿಯ ಕಲ್ತಡ್ಕ, ಜಯಪ್ರಕಾಶ್ ಕುಂಚಡ್ಕ, ದೊಡ್ಟಣ್ಣ ಬರೆಮೇಲು, ಸುಬೋಧ್ ಶೆಟ್ಟಿ ಮೇನಾಲ, ರಾಧಾಕೃಷ್ಣ ಬೊಳ್ಳೂರು, ಬಾಲಚಂದ್ರ ದೇವರಗುಂಡ,ಮಹೇಶ್ ಕುಮಾರ್ ಮೇನಾಲ, ಪ್ರಸನ್ನ ಕಲ್ಲಾಜೆ, ಶಿವರಾಮ ಕೇರ್ಪಳ, ನಾಗೇಶ್ ಕೊಚ್ಚಿ, ಸುನಿಲ್ ಕೇರ್ಪಳ, ರಜತ್ ಅಡ್ಕಾರ್, ಬುದ್ಧ ನಾಯ್ಕ್, ಸುಧಾಕರ, ಬೂಡು ರಾಧಾಕೃಷ್ಣ ರೈ, ಶೀನಪ್ಪ ಬಯಂಬು, ಗಿರೀಶ್ ಕಲ್ಲುಗದ್ದೆ, ಅರುಣ್ ಕುರುಂಜಿ, ಸತೀಶ್ ಕೆ.ಜಿ, ಜಿನ್ನಪ್ಪ ಪೂಜಾರಿ, ಬೆಳ್ಯಪ್ಪ ಗೌಡ ಬಳ್ಳಡ್ಕ, ಬಾಲಗೊಪಾಲ ಸೇರ್ಕಜೆ, ಲೀಲಾ ಮನಮೋಹನ್, ಶಿಲ್ಪಾ ಸುದೇವ್, ಪೂಜಿತಾ, ಪುಷ್ಪಾ ರಾಧಾಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಸುಳ್ಯ ನಗರಕ್ಕೆ ಆಗಮಿಸಿದ ರಥಕ್ಕೆ ಸಚಿವ ಅಂಗಾರ ಅವರ ನೇತೃತ್ವದಲ್ಲಿ ತಾಲೂಕು ಆಡಳಿತದ ವತಿಯಿಂದ ಪುಷ್ಪಾರ್ಚನೆ ಮಾಡಿ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಜ್ಯೋತಿ ವೃತ್ತದಿಂದ ಚೆನ್ನಕೇಶವ ದೇವಸ್ಥಾನದ ವರೆಗೆ ರಥದ ಮೆರವಣಿಗೆ ನಡೆಯಿತು.