ಸುಳ್ಯ: ಕಾಯರ್ತೋಡಿ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ನಡೆದಿದ್ದು ಬ್ರಹ್ಮಕಲಶದ ಲೆಕ್ಕಪತ್ರ ಮಂಡನಾ ಸಭೆಯು ಜೂ.4ರಂದು ಸಂಜೆ ದೇವಸ್ಥಾನದಲ್ಲಿ ಜರುಗಿತು.
ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು ಅಧ್ಯಕ್ಷತೆ ವಹಿಸಿದ್ದರು. ಆರ್ಥಿಕ ಸಮಿತಿಯ ಸಂಚಾಲಕರಾದ
ನಾರಾಯಣ ಕೇಕಡ್ಕ ಲೆಕ್ಕಪತ್ರ ಮಂಡಿಸಿದರು. ಬ್ರಹ್ಮಕಲಶದ ಲೆಕ್ಕ ಪತ್ರ ಮಂಡನೆಯ ಬಳಿಕ ಎಲ್ಲಾ ದಾಖಲೆಗಳನ್ನು ದೇವಸ್ಥಾನಕ್ಕೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಕೆ. ಉಮೇಶ್, ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎ.ಟಿ. ಕುಸುಮಾಧರ, ಕೋಶಾಧಿಕಾರಿ ಹರೀಶ್ ರೈ ಉಬರಡ್ಕ, ಬ್ರಹ್ಮಕಲಶ ಸಮಿತಿ ಉಪಾಧ್ಯಕ್ಷರುಗಳಾದ ಶೇಷಪ್ಪ ಗೌಡ ಡಿ.ಎಸ್., ಹರೀಶ್ ಬೂಡುಪನ್ನೆ, ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ಡಿ.ಎಸ್. ಗಿರೀಶ್, ಕೃಷ್ಣ ಬೆಟ್ಟ ಕಾಯರ್ತೋಡಿ, ಆನಂದ ನಡುಮುಟ್ಲು, ಅನಂತೇಶ್ವರಿ, ನಮಿತ ಕುಸುಮಾಧರ ಉಪಸ್ಥಿತರಿದ್ದರು. ಎ.ಟಿ. ಕುಸುಮಾಧರ ಸ್ವಾಗತಿಸಿ, ಡಿ.ಎಸ್. ಗಿರೀಶ್ ವಂದಿಸಿದರು.