ಸುಳ್ಯ: ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಅಸ್ಟಬಂಧ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿದ್ದು ದೇವಸ್ಥಾನದಲ್ಲಿ ನಿತ್ಯ ನೈಮಿತ್ಯಾಧಿಗಳ ನಿರ್ಣಯ ಕೈಗೊಳ್ಳಲಾಗಿದೆ. ದೇವಸ್ಥಾನದ ನಿತ್ಯ ನೈಮಿತ್ಯಗಳು ಕೆಳಗಿನಂತಿವೆ ಎಂದು
ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಗರ್ಭಗುಡಿ ಬಾಗಿಲು ತೆರೆಯುವ ಸಮಯ: ಬೆಳಿಗ್ಗೆ -6 ಗಂಟೆ, ಸಂಜೆ- 6 ಗಂಟೆ,ಪೂಜೆಯ ಸಮಯ: ಬೆಳಿಗ್ಗೆ 7.30, ಮಧ್ಯಾಹ್ನ 12.30, ,ರಾತ್ರಿ 7.30
ನೈವೇದ್ಯ ಕ್ರಮ:ಬೆಳಿಗ್ಗೆ ಹೊದ್ಲು, ಬೆಲ್ಲ, ಮಧ್ಯಾಹ್ನ 6 ಕುಡ್ತೆ ನೈವೇದ್ಯ, 2 ಕುಡ್ತೆ ಹಾಲು ಪಾಯಸ,ರಾತ್ರಿ 2 ಕುಡ್ತೆ ನೈವೇದ್ಯ.ಬ್ರಹ್ಮರಕ್ಷಸಿಗೆ ಮಧ್ಯಾಹ್ನ ನೆರ್ಕಿರೆ ನೈವೇದ್ಯ.

ಪ್ರತಿಷ್ಠಾ ದಿನ ಮತ್ತು ವಾರ್ಷಿಕ ಉತ್ಸವ:
ಮಕರ ಮಾಸ 12ಕ್ಕೆ ಸಂಜೆ ದೀಪೋತ್ಸವ, ಮಕರ ಮಾಸ 13 ಬೆಳಿಗ್ಗೆ ಗಣಪತಿ ಹವನ, ನವಕ ಕಲಶ, ತುಲಾಭಾರ ಸೇವೆ, ಮಹಾ ಪೂಜೆ, ರಾತ್ರಿ ಶ್ರೀಭೂತ ಬಲಿ ಉತ್ಸವ, ಮಕರ ಮಾಸ 14ರ ಬೆಳಿಗ್ಗೆ ಶ್ರೀ ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಪೂಜೆ ಮಂತ್ರಾಕ್ಷತೆ ರಾತ್ರಿ ರಂಗಪೂಜೆ,
ಮಕರ ಮಾಸ 22 ರಂದು ಪ್ರತಿಷ್ಠಾ ದಿವಸ ಸಂಕಲ್ಪದಲ್ಲಿ ದೇವರಿಗೆ ಕಲಶ, ಮಹಾಪೂಜೆ, ತ್ರಿಕಾಲ ಪೂಜೆ, ಹಸ್ತೋದಕ.
ವಿಷುವಿಗೆ ವಿಷುಕಣಿ, ದೀಪಾವಳಿ ಪೂರ್ವ ಪರ್ವ ರೀತಿಯಲ್ಲಿ ಆಚರಣೆ.ಚೌತಿಯಂದು ಗಣಪತಿ ಹವನ.ನಾಗರ ಪಂಚಮಿಗೆ ನಾಗ ತಂಬಿಲ, ಅಭಿಷೇಕ, ಅಷ್ಟಮಿಗೆ ವಿಶೇಷ ಅಲಂಕಾರಯುಕ್ತ ಪೂಜೆ, ಪ್ರತಿ ತಿಂಗಳ ಸಂಕಷ್ಟಿಗೆ ಗಣಪತಿ ಹವನ. ನವರಾತ್ರಿಯ ದಶಮಿಯಂದು ಬೆಳಿಗ್ಗೆ ಖದಿರು(ದೇವಾಲಯ ತುಂಬಿಸುವುದು), ಮಧ್ಯಾಹ್ಮ ನವಾನ್ನ(ಹೊಸ ಅಕ್ಕಿ ನೈವೇದ್ಯ). ಸತ್ಯ ನಾರಾಯಣ ಪೂಜೆ ದೇವಾಲಯದ ಹೊರಗೋಪುರದಲ್ಲಿ ನಡೆಸುವುದು ಎಂದು ನಿರ್ಧರಿಸಲಾಗಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.