ಪಂಜ: ಕೇನ್ಯದ ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕಾಯಂಬಾಡಿ- ಕಣ್ಕಲ್ ಮತ್ತು ದ.ಕ.ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಮತ್ತು ಕಡಬ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಹೊನಲು ಬೆಳಕಿನ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಪಂಜ ಸಮೀಪ ನಾಗಬ್ರಹ್ಮ ಆದಿ ಮೊಗೇರ್ಕಳ ದೈವಸ್ಥಾನ ಕಾಯಂಬಾಡಿ -ಕಣ್ಕಲ್ ಇದರ ವಠಾರದಲ್ಲಿ ನಡೆಯಿತು. ಬಳ್ಪ ಗ್ರಾಮ ಪಂಚಾಯತ್

ಅಧ್ಯಕ್ಷ ಹರ್ಷಿತ್ ಕಾರ್ಜ ಉದ್ಘಾಟಿಸಿದರು. ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರು ಅಧ್ಯಕ್ಷತೆ ವಹಿಸಿದ್ದರು. ಪಂಜ ಸಿಎ ಬ್ಯಾಂಕ್ ಉಪಾಧ್ಯಕ್ಷ ಸದಾನಂದ ಕಾರ್ಜ, ಉಪ ವಲಯ ಅರಣ್ಯಾಧಿಕಾರಿ ಸಂತೋಷ್ ರೈ, ಪ್ರಮುಖರಾದ ಪವನ್ ಪಲ್ಲತ್ತಡ್ಕ, ಸದಾನಂದ ರೈ ಅರ್ಗುಡಿ, ರಾಜೀವ್ ಗೌಡ ಕಣ್ಕಲ್, ಭರತ್ ಕೊಳಂಬೆ ಮತ್ತಿತರರು

ಉಪಸ್ಥಿತರಿದ್ದರು. ಸ್ಥಳಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಯಂಬಾಡಿ ಕೊರಗಜ್ಜ ಗೆಳೆಯರ ಬಳಗದ ಅಧ್ಯಕ್ಷ ಪ್ರಶಾಂತ್ ಕಾಯಂಬಾಡಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ದೇವಿಪ್ರಸಾದ್ ರೈ ಗೆಜ್ಜೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಪ್ರವೀಣ್ ಪೇರಳಕಟ್ಟೆ ವಂದಿಸಿದರು. ಯುವರಾಜ್ ಕಣ್ಕಲ್ ಕಾರ್ಯಕ್ರಮ ನಿರೂಪಿಸಿದರು.