ತಲಕಾವೇರಿ:ಕಾವೇರಿ ಪುಣ್ಯ ಕ್ಷೇತ್ರದಲ್ಲಿ ತಾಯಿ ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಉಕ್ಕಿ ಹರಿದು ಭಕ್ತರಿಗೆ ದರ್ಶನ ನೀಡಿದಳು. ಇಂದು ರಾತ್ರಿ 7 ಗಂಟೆ 22 ನಿಮಿಷಕ್ಕೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ನಡೆಯಿತು. ಕಾವೇರಿ ತೀರ್ಥೋದ್ಭವ ವೀಕ್ಷಿಸಲು ಕಾವೇರಿ ಕ್ಷೇತ್ರಕ್ಕೆ ಜನ ಸಾಗರವೇ ಹರಿದು ಬಂದರು. ನೆರೆದಿದ್ದ ಭಕ್ತರ ಉದ್ಘೋಷದ ನಡುವೆ ಬ್ರಹ್ಮಕುಂಡಿಕೆಯಲ್ಲಿ ಮಾತೆ ಕಾವೇರಿಯು ತೀರ್ಥರೂಪಿಣಿಯಾಗಿ
ಆವೀರ್ಭವಿಸುವ ಮೂಲಕ ನರೆದಿದ್ದ ಭಕ್ತಾದಿಗಳನ್ನು ಪುಳಕಿತರನ್ನಾಗಿಸಿದಳು. ತಲಕಾವೇರಿಯಲ್ಲಿ ಭಕ್ತಿ ಭಾವ ಪರವಶರಾಗಿದ್ದ ಭಕ್ತರ ಮುಗಿಲು ಮುಟ್ಟಿದ ಜಯಘೋಷ, ಅರ್ಚಕ ಗಣದ ವೇದಘೋಷ, ಮಂತ್ರ ಪಠಣ, ಕುಂಕುಮಾರ್ಚನೆ ನಡುವೆ ಮೇಷ ಲಗ್ನದಲ್ಲಿ ಮಾತೆ ಕಾವೇರಿಯು ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡಿದಳು. ತೀರ್ಥೋದ್ಭವಕ್ಕೂ ಮುನ್ನ
ತಲಕಾವೇರಿಯಲ್ಲಿ ಭಕ್ತಿ ಸಂಭ್ರಮದ ತೀರ್ಥೋದ್ಭವ:ಭಕ್ತರಿಗೆ ದರ್ಶನ ನೀಡಿದ ತಾಯಿ ಕಾವೇರಿ
The Sullia Mirror YouTube Channel
Watch & Subscribe
ವಿಶೇಷ ಪೂಜೆಗಳು ನಡೆದವು. ತೀರ್ಥೋದ್ಭವ ನಡೆದಾಗ ಭಕ್ತರ ಕಾವೇರಿ ಮಾತಾಕಿ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಅರ್ಚಕರು ಬ್ರಹ್ಮ ಕುಂಡಿಕೆಯಿಂದ ತೀರ್ಥವನ್ನು ತೆಗೆದು ಭಕ್ತರ ಮೇಲೆ ಸಂಪ್ರೋಕ್ಷಣೆ ಮಾಡಿದರು. ಬಳಿಕ ಕಾವೇರಿ ತೀರ್ಥ ಸಂಗ್ರಹಿಸಲು
ಹಾಗೂ ತೀರ್ಥಸ್ನಾನ ಮಾಡಲು ಭಕ್ತರ ರಶ್ ಕಂಡು ಬಂತು. ತೀರ್ಥೋದ್ಭವದ ಹಿನ್ನಲೆಯಲ್ಲಿ ಬೆಳಗ್ಗಿನಿಂದಲೇ ಭಾಗಮಂಡಲ ಭಗಂಡೇಶ್ವರ ದೇವಸ್ಥಾನದ ದರ್ಶನ ಪಡೆದು ಭಕ್ತರು ತಲಕಾವೇರಿಗೆ ಆಗಮಿಸುತ್ತಿದ್ದರು.ತಲಕಾವೇರಿ ದೇವಸ್ಥಾನ ಹಾಗೂ ಸುತ್ತಮುತ್ತ ಹೂವಿನ ಅಲಂಕಾರ ಮಾಡಲಾಗಿತ್ತು. ವಿದ್ಯುತ್ ದೀಪಗಳಿಂದ ಕಂಗೊಳಿಸಿತ್ತು. ತಲಕಾವೇರಿಗೆ ಆಗಮಿಸುವ ಭಕ್ತರಿಗೆ ಹೆಚ್ಚಿನ ಬಸ್ ವ್ಯವಸ್ಥೆ ಮಾಡಲಾಗಿತ್ತು.