ಸುಳ್ಯ: ಸುಳ್ಯದ ವಾಣೀಜ್ಯ, ವ್ಯಾಪಾರ ಕ್ಷೇತ್ರದಲ್ಲಿ ಹಲವಾರು ದಶಕಗಳ ವ್ಯವಹಾರದೊಂದಿಗೆ ಜನರ ವಿಶ್ವಾಸಕ್ಕೆ ಪಾತ್ರವಾದ ಪ್ರತಿಷ್ಠಿತ ಮಳಿಗೆ ಕಟ್ಟೆಕ್ಕಾರ್ ಫ್ಯಾನ್ಸಿ ಹಾಗೂ ಕಟ್ಟೆಕ್ಕಾರ್ ಮೆಗಾ ಶಾಪ್. ಇದೀಗ ಮಳೆಗಾಲ ಆರಂಭವಾಗುತ್ತಿದ್ದಂತೆ ಮಳೆಯಲ್ಲಿ ಒದ್ದೆಯಾಗದಂತೆ ಸುಖಕರ ಪ್ರಯಾಣಕ್ಕೆ ಜನತೆ ರೈನ್ ಕೋಟ್ ಖರೀದಿಯತ್ತ
ಚಿತ್ತ ಹರಿಸುತ್ತಿದ್ದಾರೆ.ಕಳೆದ ಹಲವು ದಶಕಗಳಿಂದ ರೈನ್ ಕೋಟ್ ಸರಬರಾಜು ಮತ್ತು ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿರುವ ಕಟ್ಟೆಕ್ಕಾರ್ ಫ್ಯಾನ್ಸಿ ಹಾಗೂ ಕಟ್ಟೆಕ್ಕಾರ್ ಮೆಗಾ ಶಾಪ್
ಬ್ರಾಂಡೆಡ್ ಕಂಪೆನಿಗಳ ರೈನ್ಕೋಟ್ಗಳ ಅಮೋಘ ಸಂಗ್ರಹದೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ. ವಿವಿಧ ಕಂಪೆನಿಗಳ ಅತ್ಯುತ್ತಮ ಗುಣಮಟ್ಟದ ರೈನ್ ಕೋಟ್ಗಳ ವರ್ಣಮಯ ಸಂಗ್ರಹ ಇಲ್ಲಿದೆ.
ವಿವಿಧ ಕಂಪೆನಿಗಳ ಬ್ರಾಂಡೆಡ್ ವರ್ಣಮಯ ರೈನ್ ಕೋಟ್ಗಳ ಹೊಸ ಸಂಗ್ರಹವೇ ಬಂದಿದೆ.
ಮಹಿಳೆಯರು-ಪುರುಷರು , ಮಕ್ಕಳಿಗೆ ಬೇಕಾದ ವಿವಿಧ ವಿನ್ಯಾಸದ ವಿವಿಧ ಬಣ್ಣಗಳ, ತಮಗೆ ಇಷ್ಟವಾಗುವಂತಹ ಆಕರ್ಷಕ ರೈನ್ ಕೋಟ್ಗಳು ಮಿತ ದರದಲ್ಲಿ ಲಭ್ಯವಿದೆ. ರೈನ್ ಕೋಟ್ ನಿರ್ಮಾಣದಲ್ಲಿ ಪ್ರಮುಖ ಕಂಪೆನಿಗಳಾದ ಝೀಲ್, ರಿಯಲ್, ಬೋಸ್, ವಿಕ್ಟರಿ,ಜಿನಿಯಸ್ ಹೀಗೆ ಎಲ್ಲಾ ಪ್ರಸಿದ್ಧ ಕಂಪೆನಿಗಳ ಬ್ರಾಂಡೆಡ್ ರೈನ್ ವೆಯರ್ಗಳು ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ. ಮಳೆಗಾಲದ ಪ್ರಯಾಣವನ್ನು ಆನಂದದಾಯಕವಾಗಿಸಲು ದೀರ್ಘ ಬಾಳ್ವಿಕೆಯ ಮತ್ತು ಗುಣ ಮಟ್ಟದ ಅತ್ಯುತ್ತಮ ರೈನ್ ವೆಯರ್ಗಳಿಗಾಗಿ ಕಟ್ಟೆಕ್ಕಾರ್ ಫ್ಯಾನ್ಸಿ ಹಾಗೂ ಕಟ್ಟೆಕ್ಕಾರ್ ಮೆಗಾ ಶಾಪ್ ಜನರ ಅತ್ಯುತ್ತಮ ಆಯ್ಕೆ.