ಸುಳ್ಯ:ಸುಳ್ಯ ಬೊಳುಬೈಲು ರಸ್ತೆ ಬದಿಯಲ್ಲಿ ಚುನಾವಣಾ ಬ್ಯಾನರೊಂದು ಪ್ರತ್ಯಕ್ಷವಾಗಿದೆ. ಬೊಳುಬೈಲು ಸಮೀಪ ಕಾಟೂರು ಭಾಗದಲ್ಲಿ ಅಭಿವೃದ್ಧಿ ಆಗಿಲ್ಲ ಎಂದು ಸ್ಥಳೀಯರು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ.ಜಾಲ್ಸೂರು ಗ್ರಾಮದ ಕಾಟೂರು ಭಾಗದಲ್ಲಿ ಅಭಿವೃದ್ಧಿ
ಕುರಿತಾಗಿ ನಿರಂತರವಾಗಿ ಹಲವು ವರ್ಷಗಳಿಂದ ಅಧಿಕಾರ ಕೇಂದ್ರಗಳಿಂದ ಆಗುತ್ತಿರುವ ಕಡಗಣನೆಯಿಂದಾಗಿ ಬೇಸತ್ತು ಮುಂಬರುವ ಚುನಾವಣೆಯನ್ನು ಬಹಿಸ್ಕರಿಸುತ್ತೇವೆ ಇತೀ ನೊಂದಿರುವ ಕಾಟೂರಿನ ನಿವಾಸಿಗಳು ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ. ಕಾಟೂರು ಭಾಗದ ಕಡೆಗೆ ತೆರಳುವ ರಸ್ತೆ ಸಮೀಪ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಬ್ಯಾನರ್ ಅಳವಡಿಸಲಾಗಿದೆ. ಕಾಟೂರು ಭಾಗದಲ್ಲಿ ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿ ಮೂಲಭೂತ ಸೌಲಭ್ಯ ಒದಗಿಸದ ಕಾರಣ ಬೇಷತ್ತು ಸ್ಥಳೀಯರು, ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಲಾಗಿದೆ ಎಂದು ತಿಳಿದು ಬಂದಿದೆ.