ಪೇರಡ್ಕ:ಮೋಹಿಯಾದ್ದಿನ್ ರಿಪಾಯಿ ದಫ್ ಅಸೋಸಿಯೇಷನ್ ಪೇರಡ್ಕ ಗೂನಡ್ಕ ಇದರ ಇಸ್ಲಾಮಿಕ್ ಕಥಾ ಪ್ರಸಂಗ ಹಾಗೂ ಸಮಾರೋಪ ಸಮಾರಂಭ ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಪೇರಡ್ಕ ದರ್ಗಾ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೇರಡ್ಕ ಎಂ.ಜೆ.ಎಂ ಅಧ್ಯಕ್ಷ ಟಿ. ಎಂ. ಶಾಹಿದ್ ತೆಕ್ಕಿಲ್ ವಹಿಸಿದ್ದರು. ಅತಿಥಿಗಳಾಗಿ
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಉಮ್ಮರ್ ಬೀಜದಕಟ್ಟೆ ಕಾರ್ಯಕ್ರಮ ಕ್ಕೆ ಶುಭ ಹಾರೈಸಿದರು. ಗಾಂಧಿನಗರ ಜುಮಾ ಮಸೀದಿ ಅಧ್ಯಕ್ಷರಾದ ಮುಸ್ತಫಾ ಹಾಜಿ, ರಾಜಧಾನಿ ಜೂವೆಲ್ಲರ್ ಮಾಲಕರಾದ ಅಬ್ದುಲ್ ರಝಕ್, ಆದಂ ಹಾಜಿ ಕಮ್ಮಾಡಿ, ದುವ ನೇತೃತ್ವ ವಹಿಸಿದ ಅದೂರ್ ಹಕೀಮ್ ತಂಗಳ್, ಆಲಿ ಹಾಜಿ ಪೇರಡ್ಕ ಖತೀಬ್ ರಿಯಾಜ್ ಫೈಜಿ , ಸಂಪಾಜೆ ಮಸೀದಿ ಖತೀಬ್ ಜಮಲುದ್ದಿನ್ ಆಲ್ ಅಮಾನಿ ಕಲ್ಲುಗುಂಡಿ ಜುಮಾ ಮಸೀದಿ ಖತೀಬ್ ನಹೀಮ್ ಫೈಜಿ ತಾಜ್ ಮಹಮ್ಮದ್,ಸಂಟ್ಯಾರ್ ಪ್ರತಿಷ್ಠಾನದ ಅಶ್ರಫ್ ಸಂಟ್ಯಾರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮ ದಲ್ಲಿ ಸುಳ್ಯದ ಉದ್ಯಮಿ ಹಮೀದ್ ಕುತ್ತಮೊಟ್ಟೆ ಯವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮ ದಲ್ಲಿ ಝುಬೈರ್ ಮಾಸ್ಟರ್ ತೋಟಿಕಲ್ ರವರ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಿತು. ದಫ್ ಅಸೋಸಿಯೇಷನ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸ್ವಾಗತಿಸಿ ಅಬ್ದುಲ್ ಖಾದರ್ ಮೊಟ್ಟಂಗಾರ್ ವಂದಿಸಿದರು














