ಕಾಸರಗೋಡು:ಜಿಲ್ಲಾ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಸಿಪಿಐಎಂನ ಸಾಬು ಅಬ್ರಹಾಂ ಪ್ರಮಾಚವಚನ ಮಾಡಿ ಅಧಿಕಾರ ಸ್ವೀಕರಿಸಿದರು.
ಜಿಲ್ಲಾ ಪಂ.ಕಾರ್ಯಾಲಯದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಕೆ. ಇಂಬುಸೇಕರ್ ಪ್ರಮಾಣವಚನ ಭೋಧಿಸಿದರು.ಸಹಾಯಕ ಚುನಾವಣಾಧಿಕಾರಿ ಎಡಿಎಂ. ಪಿ ಅಖಿಲ್, ಜಿ. ಪಂ. ಕಾರ್ಯದರ್ಶಿ ಎಸ್. ಬಿಜು ಮೊದಲಾದವರು ಚುನಾವಣಾ ಕರ್ತವ್ಯ ನೆರವೇರಿಸಿದರು. ಉಪಾಧ್ಯಕ್ಷರಾಗಿ ಕೆ.ಕೆ.ಸೋಯ ಆಯ್ಕೆಯಾದರು.
ಜಿ. ಪಂ. ಕಾರ್ಯಾಲಯದಲ್ಲಿ ನಡೆದ
ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಏಳರ ವಿರುಧ್ಧ 9 ಮತಗಳ ಅಂತರದಲ್ಲಿ ಸಾಬು ಅಬ್ರಹಾಂ ಅಧ್ಯಕ್ಷರಾಗಿ ಉಪಾಧ್ಯಕ್ಷರಾಗಿ ಕೆ.ಕೆ.ಸೋಯ ಚುನಾಯಿತರಾದರು. ಯುಡಿಎಫ್ ನಿಂದ ಪ್ರತಿಸ್ಪರ್ಧಿಯಾಗಿ ಪುತ್ತಿಗೆಯ ಪ್ರತಿನಿಧಿ ಸೋಮಶೇಖರ ಜೆ. ಎಸ್. ಸ್ಪರ್ಧಿಸಿದ್ದರು. ಬಿಜೆಪಿಯ ಏಕೖಕ ಸದಸ್ಯ ರಾಮಪ್ಪ ಮಂಜೇಶ್ವರ ಚುನಾವಣೆ ಬಹಿಷ್ಕರಿಸಿ ತಟಸ್ಥರಾದರು. ನಿಶ್ಚಿತ ಸಮಯಕ್ಕೆ ತಲುಪಲಾಗದೇ ಯುಡಿಎಫ್ ನ ಓರ್ವ ಸದಸ್ಯರಿಗೆ ಮತದಿನದಲ್ಲಿ ಪಾಲ್ಗೊಳ್ಳಲಿಕ್ಕಾಗಲಿಲ್ಲ. ಅಧ್ಯಕ್ಷರಾಗಿ ಚುನಾಯಿತರಾದ ಸಿಪಿಎಂನ ಸಾಬು ಅಬ್ರಹಾಂ ಜಿ. ಪಂ. ಕುತ್ತಿಕೋಲ್ ಡಿವಿಜನ್ ಪ್ರತಿನಿಧಿಯಾಗಿದ್ದಾರೆ.

















