ಕಾಸರಗೋಡು:ಕೇರಳದಲ್ಲಿ ಏ.9ರಂದು ನಡೆಯುವ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅವಧಿ ಇಂದು ಕೊನೆಗೊಂಡಿತು. 140 ಕ್ಷೇತ್ರಗಳಿಗೆ ಒಟ್ಟು 1269 ನಾಮಪತ್ರಗಳು ಸಲ್ಲಿಕೆಯಾದವು. ಕಾಸರಗೋಡು ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಎಂ.ಎಲ್.ಅಶ್ವಿನಿ, ತ್ರಿಕ್ಕರಿಪುರ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ
ಸಂದೀಪ್ ವಾರಿಯರ್, ಮಂಜೇಶ್ವರ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ.ಅಶ್ರಫ್, ಕಾಸರಗೋಡು ಯುಡಿಎಫ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ, ಕಾಸರಗೋಡು ಎಲ್ಡಿಎಫ್ ಅಭ್ಯರ್ಥಿ ಶಾನವಾಝ್ ಪಾದೂರು ಸೇರಿ ಪ್ರಮುಖರು ಇಂದು ನಾಮಪತ್ರ ಸಲ್ಲಿಸಿದರು.
ರೋಡ್ ಶೋ ನಡೆಸುವ ಮೂಲಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಎನ್ ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್.ರೋಡ್ ಶೋ ವೇಳೆ ಚಿತ್ರನಟಿ ಹರ್ಷಿತಾ ಪೂಣಚ್ಚ, ಮಂಜೇಶ್ವರ ಅಭ್ಯರ್ಥಿ, ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್,ಬೖಂದೂರು ಶಾಸಕ ಗುರುರಾಜ ಗಂಟಿಹೊಳೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್, ದ. ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ನಾಯಕರಾದ ಕೆ. ಶ್ರೀಕಾಂತ್, ಕುಂಟಾರು ರವೀಶ ತಂತ್ರಿ ಮತ್ತಿತರರು ಇದ್ದರು.














