ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಚೆನ್ನಕೇಶವ ದೇವಸ್ಥಾನ ಇದರ ವತಿಯಿಂದ ಕೋಟಿ ಕಂಠ ಗಾಯನ ಕಾರ್ಯಕ್ರಮ ಶ್ರೀ ಚೆನ್ನ ಕೇಶವ ದೇವಸ್ಥಾನದ ಸಭಾಂಗಣ ಸುಳ್ಯದಲ್ಲಿ ನಡೆಯಿತು. ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಉದ್ಘಾಟಿಸಿದರು. ಭಾವನಾ ಸುಗಮ ಸಂಗೀತ ಬಳಗದ
ಅಧ್ಯಕ್ಷ ಕೆ ಆರ್ ಗೋಪಾಲಕೃಷ್ಣ, ಗಿರಿಜಾ ಎಂ ವಿ , ಯಶೋದಾ ಎಂ ಬಿ, ಮತ್ತು ವೇದಾವತಿ ಕೇರ್ಪಳ ಇವರು ಸಹಕರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಹರಪ್ರಸಾದ ತುದಿಯಡ್ಕ ಇವರು ವಹಿಸಿದರು. ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಲೀಲಾ ದಾಮೋದರ್, ಕಸಾಪ ಜಿಲ್ಲಾ ಪ್ರತಿನಿಧಿ ರಾಮಚಂದ್ರ ಪಲ್ಲತಡ್ಕ, ಹೇಮಾ ದೆಂಗೊಡಿ, ಕೇಶವ ಸಿ ಎ, ಲೋಕನಾಥ ಬೊಳುಬೈಲು, ಜಯರಾಮ ಶೆಟ್ಟಿ, ಪ್ರಭಾಕರನ್ ಸಿ ಹೆಚ್ ಇವರು ಉಪಸ್ತಿತರಿದ್ದರು. ಕಸಾಪ ಅಧ್ಯಕ್ಷ ಚಂದ್ರಶೇಖರ ಪೇರಾಲು ಇವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತೇಜಸ್ವಿ ಕಡಪಳ ವಂದಿಸಿದರು.