ಮುಂಬೈ: ರಣಜಿ ಟ್ರೋಫಿ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ 4 ವಿಕೆಟ್ಗಳ ರೋಚಕ ಜಯ ಸಾಧಿಸಿದ ದೇವದತ್ತ ಪಡಿಕ್ಕಲ್ ನಾಯಕತ್ವದ ಕರ್ನಾಟಕ ತಂಡವು ಸೆಮಿಫೈನಲ್ ಪ್ರವೇಶಿಸಿದೆ.ಮೂರನೇ ದಿನದಾಟದ ಅಂತ್ಯಕ್ಕೆ 29 ಓವರ್ಗಳಲ್ಲಿ
2 ವಿಕೆಟ್ಗಳಿಗೆ 113 ರನ್ ಗಳಿಸಿದ್ದ ಕರ್ನಾಟಕ ತಂಡ ನಾಲ್ಕನೇ ದಿನದಾಟದ ಆರಂಭದಲ್ಲೇ 13 ರನ್ ಗಳಿಸಿದ್ದ ಕರುಣ್ ನಾಯರ್ ವಿಕೆಟ್ ಕಳೆದುಕೊಂಡಿತು.
ಮೂರನೇ ದಿನದಾಟದಲ್ಲಿ 60 ರನ್ ಗಳಿಸಿ ಅಜೇಯರಾಗಿ ಉಳಿದಿದ್ದ ಕೆ.ಎಲ್ ರಾಹುಲ್ ಅವರು ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲೇ ಆಕರ್ಷಕ ಶತಕ ಸಿಡಿಸಿ ಮಿಂಚಿದರು. 130 ರನ್ ಗಳಿಸಿ, ತುಷಾರ್ ದೇಶಪಾಂಡೆಗೆ ವಿಕೆಟ್ ಒಪ್ಪಿಸಿದರು.
ಮಧ್ಯಮ ಕ್ರಮಾಂಕದಲ್ಲಿ ಸತತ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕ ತಂಡಕ್ಕೆ ಸ್ಮರಣ್ ರವಿಚಂದ್ರನ್ ಆಸರೆಯಾದರು. ಅಜೇಯ 83 ರನ್ ಗಳಿಸಿದರು. 7ನೇ ವಿಕೆಟ್ಗೆ ವಿದ್ಯಾಧರ ಪಾಟೀಲ (ಅಜೇಯ 31 ರನ್) ಜತೆ 40 ರನ್ಗಳ ಜತೆಯಾಟ ಆಡುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.







