ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ‘ಗೌರವ ಪ್ರಶಸ್ತಿ’ಗೆ ಸಾಹಿತಿಗಳಾದ ಪ್ರೊ.ಶಿವರಾಮಯ್ಯ (ಬೆಂಗಳೂರು), ಚಂದ್ರಶೇಖರ ತಾಳ್ಯ (ಚಿತ್ರದುರ್ಗ), ಚಂದ್ರಕಾಂತ ಪೋಕಳೆ (ಬೆಳಗಾವಿ), ಡಾ. ವಸುಂಧರಾ ಭೂಪತಿ (ಬಳ್ಳಾರಿ) ಹಾಗೂ ಎಸ್. ತುಕಾರಾಂ (ಮೈಸೂರು) ಆಯ್ಕೆಯಾಗಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹಾಗೂ
ರಿಜಿಸ್ಟ್ರಾರ್ ಜೆ. ಕರಿಯಪ್ಪ ಮಾಳಿಗೆ ಅವರು ಅಕಾಡೆಮಿ ಸದಸ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿದರು. ‘ಗೌರವ ಪ್ರಶಸ್ತಿ’ಯು ತಲಾ ರೂ.50 ಸಾವಿರ ನಗದು ಬಹುಮಾನ ಒಳಗೊಂಡಿದೆ. 2025ನೇ ಸಾಲಿನ ‘ಸಾಹಿತ್ಯ ಶ್ರೀ’ ಪ್ರಶಸ್ತಿಗೆ ನಿಷ್ಠಿ ರುದ್ರಪ್ಪ (ಬಳ್ಳಾರಿ), ವೀರೇಶ ಬಡಿಗೇರ (ಬಾಗಲಕೋಟೆ), ಸಿ.ಜಿ. ಲಕ್ಷ್ಮೀಪತಿ (ಚಿತ್ರದುರ್ಗ), ಕಂನಾಡಿಗ ನಾರಾಯಣ (ಬೆಂಗಳೂರು), ರೂಪ ಹಾಸನ (ಹಾಸನ), ಜಯರಾಮ್ ರಾಯಪುರ (ವಿಜಯವಾಡ), ಕುಮುದಾ ಸುಶೀಲ್ (ದಾವಣಗೆರೆ), ಓ. ನಾಗರಾಜು (ತುಮಕೂರು), ಬಿ.ಎಂ. ಬಷೀರ್ (ಮಂಗಳೂರು) ಹಾಗೂ ಜ್ಯೋತಿ (ಬೆಂಗಳೂರು) ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿಯು ತಲಾ 25 ಸಾವಿರ ಒಳಗೊಂಡಿದೆ.
2024ರ ಪುಸ್ತಕ ಬಹುಮಾನಕ್ಕೆ ವಿಮರ್ಶಕರ ಅಭಿಪ್ರಾಯ ಆಧರಿಸಿ 17 ಕೃತಿಗಳನ್ನು ಆಯ್ಕೆ ಮಾಡಲಾಗಿದೆ. ಈ ಬಹುಮಾನವು ತಲಾ 25 ಸಾವಿರ ನಗದು ಒಳಗೊಂಡಿದೆ. 2024ರ ವಿವಿಧ ದತ್ತಿ ಬಹುಮಾನಗಳಿಗೆ 11 ಕೃತಿಗಳು ಆಯ್ಕೆಯಾಗಿವೆ.
‘ಗೌರವ ಪ್ರಶಸ್ತಿಗೆ 60 ವರ್ಷ ಮೇಲ್ಪಟ್ಟವರನ್ನು ವಿಭಾಗವಾರು ಆಯ್ಕೆ ಮಾಡಲಾಗಿದೆ. ಸಾಹಿತ್ಯಶ್ರೀ ಪ್ರಶಸ್ತಿಗೆ 50ರಿಂದ 60 ವರ್ಷದೊಳಗಿನವರನ್ನು ಪರಿಗಣಿಸಲಾಗಿದೆ ಎಂದು ಎಲ್.ಎನ್. ಮುಕುಂದರಾಜ್ ಹೇಳಿದರು.
ಕಾವ್ಯ ಚಲಿಸುತ್ತಿವೆ ಚುಕ್ಕಿಗಳು ಭಾರತೀದೇವಿ ಪಿ.,
ಪ್ರಥಮ ಸಂಕಲನ ಪ್ಯೂಪಾ ಶಶಿ ತರೀಕೆರೆ,ಕಾದಂಬರಿ ಇಮಾಮ್ ಸಾಹೇಬರ ಕುದುರೆ ವೈ.ಎಸ್. ಹರಗಿ, ಸಣ್ಣಕತೆ ಸರ್ವೆ ನಂಬರ್–97 ಅನಿಲ್ ಗುನ್ನಾಪೂರ, ನಾಟಕ ಗಂಧವತಿ ಚಂದ್ರು ಕಾಳೇನಹಳ್ಳಿ,
ಲಲಿತ ಪ್ರಬಂಧ ಒಂದು ತಲೆ ಚವುರದ ಕಥೆ ಶಿವರಾಜ ಬ್ಯಾಡರಹಳ್ಳಿ, ಪ್ರವಾಸ ಸಾಹಿತ್ಯ ತಿರುಗಾಟ ಮಲ್ಲಿಕಾರ್ಜುನ ಹುಲಗಬಾಳಿ,
ಜೀವನ ಚರಿತ್ರೆ/ಆತ್ಮಕಥೆ ಚಿಮಣಿ ಬೆಳಕಿನಿಂದ ಎಂ.ಜಿ. ಹೆಗಡೆ, ಸಾಹಿತ್ಯ ವಿಮರ್ಶೆ ಬೆಳಕು ಬೆಳೆಯುವ ಹೊತ್ತು ಮಹಾಂತೇಶ ಪಾಟೀಲ, ಮಕ್ಕಳ ಸಾಹಿತ್ಯ ಬಿಸಿ ಬಿಸಿ ಬಾತು ರಾಜಶೇಖರ ಕುಕ್ಕುಂದಾ, ವಿಜ್ಞಾನ ಸಾಹಿತ್ಯ ಪಕ್ಷಿಗಳ ವಿಸ್ಮಯ ವಿಶ್ವ ಶ್ರೀಧರ ತುಮರಿ,ಮಾನವಿಕ ಪ್ರಜಾಮಾತೆ ಎನ್.ಎನ್. ಚಿಕ್ಕಮಾದು,
ಸಂಶೋಧನೆ ದಾಸೊಕ್ಕಲಿಗರು ಹಂಪನಹಳ್ಳಿ ತಿಮ್ಮೇಗೌಡ,
ಅನುವಾದ-1 ಜಾತಿ ಮತ್ತು ಲಿಂಗತ್ವ ದು. ಸರಸ್ವತಿ,
ಅಂಕಣ/ವೈಚಾರಿಕ ಬರಹ ನುಡಿ ಕಂಡಾಯ ಹುಲಿಕುಂಟೆ ಮೂರ್ತಿ,
ಲೇಖಕರ ಮೊದಲ ಸ್ವತಂತ್ರ ಕೃತಿ ತಿದಿಯ ತುದಿಗೆ ಬೆಂಕಿಯ ಉಗುಳು ಲಕ್ಷ್ಮಣ ಶರೆಗಾರ,ಸಂಕೀರ್ಣ ನರವಾನರ ಪ್ರದೀಪ್ ಕೆಂಜಿಗೆ,
ದತ್ತಿನಿಧಿ ಬಹುಮಾನ ಕೃತಿಯ ಹೆಸರುಲೇಖಕರು,ಕಾದಂಬರಿ ಚದುರಂಗ ದತ್ತಿನಿಧಿ ಬಹುಮಾನ ಬಹುರೂಪಿ ಪ್ರೇಮಕುಮಾರ್ ಹರಿಯಬ್ಬೆ,
ಲಲಿತ ಪ್ರಬಂಧ ವಿ. ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ ನನ್ನೂರಿನ ಶ್ರೀಸಾಮಾನ್ಯರು ಕಡಿದಾಳ್ ಪ್ರಕಾಶ್
ಜೀವನಚರಿತ್ರೆ ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ ಕಳೆದ ಕಾಲ ನಡೆದ ದೂರ ನ್ಯಾ. ಶಿವರಾಜ ವಿ. ಪಾಟೀಲ,ಸಾಹಿತ್ಯ ವಿಮರ್ಶೆ ಪಿ. ಶ್ರೀನಿವಾಸರಾವ್ ದತ್ತಿನಿಧಿ ಬಹುಮಾನ ಒಳಮೀಸಲಾತಿ ಮತ್ತು ಇತರ ಲೇಖನಗಳು ಎಚ್. ಲಕ್ಷ್ಮೀನಾರಾಯಣಸ್ವಾಮಿ
ಕಾವ್ಯ ಹಸ್ತಪ್ರತಿ ಚಿ. ಶ್ರೀನಿವಾಸರಾಜು ದತ್ತಿ ಬಹುಮಾನ ಆಕೆ ಒಂದು ಹೂವು ಮತ್ತು ಹಿಡಿ ಮಣ್ಣು ಅಭಿಷೇಕ ಬಳೆ ಮಸರಕಲ್
ಅನುವಾದ–1 ಎಲ್. ಗುಂಡಪ್ಪ ಮತ್ತು ಶಾರದಮ್ಮ ದತ್ತಿನಿಧಿ ಬಹುಮಾನ ಸತ್ತವರ ಸೊಲ್ಲು ಕಾರ್ತಿಕ್ ಆರ್.ಲೇಖಕರ ಮೊದಲ ಸ್ವತಂತ್ರ ಕೃತಿ ಮಧುರಚೆನ್ನ ದತ್ತಿನಿಧಿ ಬಹುಮಾನ ರಾಕ್ಷಸರ ನಡುವೆ ಪಯಣ ಶೈಲಜಾ ಅಶ್ವಥ್ ಕೋಲಾರ ವೈಚಾರಿಕ/ಅಂಕಣ ಬರಹ ಬಿ.ವಿ. ವೀರಭದ್ರಪ್ಪ ದತ್ತಿನಿಧಿ ಬಹುಮಾನ ವಾರ್ತಾಭಾರತಿ ಸಂಪಾದಕೀಯ ಎ.ಎಸ್. ಪುತ್ತಿಗೆ, ಕನ್ನಡದಿಂದ ಇಂಗ್ಲಿಷ್ಗೆ ಅನುವಾದ ಅಮೆರಿಕನ್ನಡ ದತ್ತಿನಿಧಿ ಬಹುಮಾನ ಕುವೆಂಪು ಬ್ರೈಡ್ ಇನ್ ದಿ ಹಿಲ್ಸ್ ವನಮಾಲಾ ವಿಶ್ವನಾಥ್
ದಾಸ ಸಾಹಿತ್ಯ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿನಿಧಿ ಬಹುಮಾನ ಹರಿದಾಸರ ಮುಂಡಿಗೆಗಳು ಕಬ್ಬಿನಾಲೆ ವಸಂತ ಭಾರದ್ವಾಜ
ಗಜಲ್ ಕಾವ್ಯ ನಾಡೋಜ ಡಾ. ಶಾಂತರಸ ಗಜಲ್ ಕಾವ್ಯ ದತ್ತಿ ಬಹುಮಾನ ನೆಲ ನುಡಿದ ನಾದ ಯು. ಸಿರಾಜ್ ಅಹಮದ್









