ಹೊಸದಿಲ್ಲಿ: ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ ಶನಿವಾರ ಪ್ರಕಟಿಸಿದ್ದು, ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಎಪ್ರಿಲ್ 26 ರಂದು ಮೊದಲ ಹಂತ ಮತ್ತು ಮೇ 7 ರಂದು 2ನೇ ಹಂತದ ಮತದಾನ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಎ.26 ರಂದು ಚುನಾವಣೆ ನಟಯಲಿದೆ.
14 ಕ್ಷೇತ್ರಗಳು- ಮತದಾನ ಏಪ್ರಿಲ್ 26ಕ್ಕೆ:
ಉಡುಪಿ ಚಿಕ್ಕಮಗಳೂರು
ಹಾಸನ,ದಕ್ಷಿಣ ಕನ್ನಡ
ಚಿತ್ರದುರ್ಗ, ತುಮಕೂರು
ಮಂಡ್ಯ,ವಮೈಸೂರು
ಚಾಮರಾಜನಗರ, ಬೆಂಗಳೂರು ಗ್ರಾಮಾಂತರ,ಬೆಂಗಳೂರು ಉತ್ತರ,ಬೆಂಗಳೂರು ದಕ್ಷಿಣ
ಬೆಂಗಳೂರು ಕೇಂದ್ರ, ಚಿಕ್ಕಬಳ್ಳಾಪುರ.ಕೋಲಾರ.
ಕರ್ನಾಟಕದಲ್ಲಿ ಮೇ 7ಕ್ಕೆ ಎರಡನೇ ಹಂತದ ಮತದಾನ ನಡೆಯಲಿದೆ. ಈ ಹಂತದಲ್ಲಿ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
ಚಿಕ್ಕೋಡಿ, ಬೆಳಗಾವಿ
ಬಾಗಲಕೋಟೆ, ವಿಜಯಪುರ
ಕಲಬುರಗಿ,ರಾಯಚೂರು
ಬೀದರ್, ಕೊಪ್ಪಳ, ಬಳ್ಳಾರಿ
ಹಾವೇರಿ, ಧಾರವಾಡ
ಉತ್ತರ ಕನ್ನಡ, ದಾವಣಗೇರೆ
ಶಿವಮೊಗ್ಗ ಜೂನ್ 4ಕ್ಕೆ ಫಲಿತಾಂಶ ಪ್ರಕಟಚಾಗಲಿದೆ.
ಇದರೊಂದಿಗೆ ರಾಜಾ ವೆಂಕಟಪ್ಪ ನಾಯಕ ಅವರ
ತೆರವಾಗಿರುವ ಸುರಪುರ ಕ್ಷೇತ್ರದ ಉಪ ಚುನಾವಣೆಯೂ ಅಂದೇ ನಡೆಯಲಿದೆ.
ಶನಿವಾರ ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಮುಖ್ಯ ಚುನಾವಾಣಾ ಆಯುಕ್ತ ರಾಜೀವ್ ಕುಮಾರ್ ಮಾಹಿತಿ ನೀಡಿದರು.









