ಕರಿಕೆ: ಗಡಿ ಗ್ರಾಮವಾದ ಮಡಿಕೇರಿ ತಾಲೂಕಿನ ಕರಿಕೆ ಗ್ರಾಮ ಪಂಚಾಯಿತಿಯ 2ನೇ ಅವಧಿಯ ಅಧ್ಯಕ್ಷರಾಗಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿ ಎನ್ ಬಾಲಚಂದ್ರನ್ ನಾಯರ್ ಮತ್ತು ಉಪಾದ್ಯಕ್ಷರಾಗಿ ಕುದುಪಜೆ ಕಲ್ಪನಾ ಜಗದೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿ ಸಹಾಯಕ ಕೃಷಿ ನಿರ್ದೇಶ ರಿಯಾಜ್ ಅಹಮ್ಮದ್ ಚುನಾವಣಾ ಅಧಿಕಾರಿಯಾಗಿದ್ದರು. ಗಡಿ ಗ್ರಾಮವಾದ ಕರಿಕೆ ಗ್ರಾಮ ಪಂಚಾಯಿತಿಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ಅಧ್ಯಕ್ಷರಾದ ಎನ್ ಬಾಲಚಂದ್ರನ್ ನಾಯರ್ ಹೇಳಿದ್ದಾರೆ.