ಕರಿಕೆ: ಬಹು ನಿರೀಕ್ಷಿತ ಕರಿಕೆ- ಭಾಗಮಂಡಲ ಹೆದ್ದಾರಿ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಚಾಲನೆ ನೀಡಿದರು. 12 ಕೋಟಿ ಅನುದಾನದಲ್ಲಿ ರಸ್ತೆ ಮರು ನಿರ್ಮಾಣ ಕಾಮಗಾರಿ ನಡೆಯಲಿದೆ. ಕರಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಸ್ಮಾಯಿಲ್, ಕರಿಕೆ
ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ಡಿ ದೇವರಾಜ್, ಜಿಲ್ಲಾ ಸರಕಾರಿ ವಕೀಲರಾದ ಎನ್.ಶ್ರೀಧರನ್ ನಾಯರ್, ಕರಿಕೆ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕಲ್ಪನಾ ಜಗದೀಶ್, ಕರಿಕೆ ಗ್ರಾಮ ಪಂಚಾಯತ್ ಪಿ. ಡಿ.ಒ ಪಿ.ಪಿ ಗಣಪತಿ, ಪಂಚಾಯತ್ ಸದಸ್ಯರಾದ ಆಯಿಷಾ ಎಂ. ಹೆಚ್, ಪಿ.ಪಿ ರಾಜಕುಮಾರ, ಕೆ.ಎ. ದೇವದತ್ತ, ಜಯಶ್ರೀ, ಕೆ.ಎ. ನಾರಾಯಣ, ಸಹಕಾರ ಬ್ಯಾಂಕ್ ನಿರ್ದೇಶಕರಾದ ಕೆ.ಪಿ.ಸುಬ್ರಮಣಿ, ಕೆ.ಕೆ. ಜಗದೀಶ, ಟಿ ಆರ್ ಶ್ರೀನಿವಾಸ, ಧನ್ಯ ಶ್ರೀಕುಮಾರ, ಬೂತ್ ಅಧ್ಯಕ್ಷರಾದ ಎ.ಯು ಉಮ್ಮರ್, ಕೆ.ಸಿ ಕೃಷ್ಣ, ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ ಜಯನ್ ಎ.ಎಂ, ಪ್ರಮುಖರಾದ ಕೆ.ಆರ್ ಶಿವಪ್ಪ, ಬಿ.ಆರ್. ಬಾಲಕೃಷ್ಣ, ಎ. ಡಿ ಆಬಿದ್, ಸುಬೈರ್ ಎಂ.ಇ, ಸಿದ್ದಿಕ್ ಎಂ ಹೆಚ್ ಮತ್ತು ಸಾರ್ವಜನಿಕರು ಭಾಗವಹಿಸಿದರು.
ಕರಿಕೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಚ್ಚೆ ಪಿಲಾವು, ದೊಡ್ಡಚೇರಿ, ಪಳ್ಳಿಕಳ, ಚೆತ್ತುಕಯ ಈ ಭಾಗದಲ್ಲಿ ನಡೆದ ಚಿರತೆ ಹಾವಳಿ ಬಗ್ಗೆ ಉಪ ವಲಯ ಅರಣ್ಯ ಅಧಿಕಾರಿ ಯವರಿಂದ ಮಾಹಿತಿ ಕೇಳಿಕೊಂಡು, ಅಗತ್ಯ ಇದ್ದರೆ ಹೆಚ್ಚಿನ ಬೋನ್ (ಗೂಡು) ಇರಿಸುವಂತೆ ಪೊನ್ನಣ್ಣ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಕರಿಕೆ ಗಡಿ ಭಾಗದಲ್ಲಿರುವ ಪಂಚಾಯತಿಯ ಬಸ್ ನಿಲ್ದಾಣ ಜಾಗವನ್ನು ಪರಿಶೀಲಿಸಿ, ಬಸ್ ನಿಲ್ದಾಣ ಮತ್ತು ವಾಣಿಜ್ಯ ಮಹಡಿಯನ್ನು ಮಂಜೂರು ಮಾಡುವ ಭರವಸೆ ನೀಡಿದರು.
ಗಡಿ ಭಾಗ ಚೆಂಬೇರಿಯಲ್ಲಿ ಕರ್ನಾಟಕಕ್ಕೆಸ್ವಾಗತ ದ್ವಾರವನ್ನು ನಿರ್ಮಿಸಿ ಕೊಡುವುದಾಗಿ ತಿಳಿಸಿದರು.