ಸುಳ್ಯ:ಸುಳ್ಯ ತಾಲೂಕು ನಿವೃತ್ತ ಸೈನಿಕರ ಸಂಘ ಹಾಗೂ ನಗರ ಪಂಚಾಯತ್ ವತಿಯಿಂದ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ಜುಲೈ 26 ರಂದು ನಗರ ಪಂಚಾಯತ್ ವಠಾರದಲ್ಲಿ ಜೈ ಜವಾನ್ ಸ್ಮಾರಕಕ್ಕೆ ಪುಷ್ಪಾರ್ಚನೆ ಹಾಗೂ ಗೌರವ ನಮನದೊಂದಿಗೆ ಕಾರ್ಯಕ್ರಮ ನಡೆಯಿತು.ಮುಖ್ಯ ಅತಿಥಿಯಾಗಿ ಶಾಸಕಿ ಭಾಗೀರಥಿ ಮುರುಳ್ಯ ಭಾಗವಹಿಸಿ ಮಾತನಾಡಿದರು.ಸುಳ್ಯ ನಿವೃತ್ತ ಸೈನಿಕರ ಸಂಘದ
ಅಧ್ಯಕ್ಷ ಜಯಕರ ಎಂ ಡಿ, ಗೌರವಾಧ್ಯಕ್ಷ ದೇರಣ್ಣ ಗೌಡ ಅಡ್ಡಂತಡ್ಕ,ಸುಳ್ಯ ನ.ಪಂ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಸುಡಾ ಅಧ್ಯಕ್ಷ ಕೆ.ಎಂ. ಮುಸ್ತಫ ಉಪಸ್ಥಿತರಿದ್ದರು.ನಿವೃತ್ತ ಸೈನಿಕರ ಸಂಘದ ಸದಸ್ಯರು ಹಾಗೂ ಸುಳ್ಯ ಎನ್ ಎಂ ಸಿ ಕಾಲೇಜು ಎನ್ ಸಿ ಸಿ ಕೇಡಿಡೆಟ್ಗಳಿಂದ ಗೌರವ ವಂದನೆ ನಡೆಯಿತು.
ಬಳಿಕ ಗಣ್ಯರಿಂದ ವೀರ ಸ್ಮಾರಕಕ್ಕೆ ಮಾಲಾರ್ಪಣೆ ಹಾಗೂ ಪುಷ್ಪಾರ್ಚನೆ ನಡೆಯಿತು.ಈ ಸಂಧರ್ಭ ದಲ್ಲಿ ಸುಳ್ಯ ಪೊಲೀಸ್ ಠಾಣಾ ಎಸ್ ಐ ಸಂತೋಷ್,ನ ಪಂ ಉಪಾಧ್ಯಕ್ಷ ಬುದ್ಧ ನಾಯ್ಕ, ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರುಗಳಾದ ವಿನಯ್ ಕುಮಾರ್ ಕಂದಡ್ಕ, ಎಂ ವೆಂಕಪ್ಪ ಗೌಡ, ಹಾಗೂ ನ. ಪಂ ಸದಸ್ಯರುಗಳು,ನಿವೃತ್ತ ಸೇನಾನಿ ಸಂಘದ ಪದಾಧಿಕಾರಿಗಳು, ಸದಸ್ಯರುಗಳು,ನ ಪಂ ಸಿಬ್ಬಂದಿಗಳು,ಪೌರ ಕಾರ್ಮಿಕರು,ಪೊಲೀಸ್ ಠಾಣಾ ಸಿಬ್ಬಂದಿಗಳು ಉಪಸ್ಥಿತರಿದ್ದರು.





