ಸುಳ್ಯ: ಮೈಸೂರಿನ ಕೊಡವ ಸಮಾಜದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಹಿಟೋರಿಯೋ ಕರಾಟೆ ಸ್ಪರ್ಧೆಯ ಕುಮಿಟ್ ವಿಭಾಗದಲ್ಲಿ ಕೆ ವಿ ಜಿ ಐ ಪಿ ಎಸ್ ನ 10 ನೇ ತರಗತಿಯ ವಿದ್ಯಾರ್ಥಿ ವರ್ಷಿತ್ ಎಮ್ ಪ್ರಥಮ ಸ್ಥಾನ ಪಡೆದು ನವೆಂಬರ್ 27 ರಿಂದ ಡಿಸೆಂಬರ್ 2ರವರೆಗೆ ಸಿಂಗಾಪುರದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಗೆ
ಆಯ್ಕೆ ಆಗಿರುತ್ತಾರೆ. ಇವರನ್ನು ಶಾಲೆಯಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಶಾಲಾ ಸಂಚಾಲಕರಾದ ಡಾ. ರೇಣುಕಾ ಪ್ರಸಾದ್ ಕೆ ವಿ ಶುಭ ಹಾರೈಸಿದರು.ಶಾಲಾ ಮುಖ್ಯ ಕಾರ್ಯನಿರ್ವಾನಾಧಿಕಾರಿ ಡಾ.ಉಜ್ವಲ್ ಯು ಜೆ, ಕೆವಿಜಿ ಐಟಿಐ ನ ಪ್ರಾಂಶುಪಾಲ ಚಿದಾನಂದ ಬಾಳಿಲ, ಸುಳ್ಯ ನಗರ ಪಂಚಾಯತಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ಕೆವಿಜಿ ಡೆಂಟಲ್ ಕಾಲೇಜಿನ ವೈದ್ಯ ಡಾ. ರೇವಂತ್,ಕೆವಿಜಿ ಐಪಿಎಸ್ ನ ಪ್ರಾಂಶುಪಾಲ ಅರುಣ್ ಕುಮಾರ್, ಉಪಪ್ರಾಂಶುಪಾಲೆ ಶಿಲ್ಪ ಬಿದ್ದಪ್ಪ ಶಾಲಾ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಇವರಿಗೆ ಕರಾಟೆ ಶಿಕ್ಷಕರಾದ ಚಂದ್ರಶೇಖರ್ ಕನಕಮಜಲು ಮಾರ್ಗ ದರ್ಶನ ನೀಡಿರುತ್ತಾರೆ. ಇವರು ವಸಂತ ಕುಮಾರ್ ಮೀನಗದ್ದೆ ಹಾಗೂ ಜಯಶ್ರೀ ವಸಂತ ಕುಮಾರ್ ಮೀನಗದ್ದೆ ಇವರ ಪುತ್ರ.