ಸುಳ್ಯ:ಭಾರತೀಯ ಕರಾಟೆ ಸ್ವಯಂ ರಕ್ಷಣಾ ಶಾಲೆ – ಭಾರತ ಮತ್ತು ಮಂಗಳೂರು ಭಾರತೀಯ ಕರಾಟೆ ಡೋಜೋ ಏರ್ಪಡಿಸಿರುವ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ 2024 ಇದರಲ್ಲಿ ಕೆವಿಜಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನ ಪಡೆದರು.ಹತ್ತನೇ ತರಗತಿಯ ವರ್ಷಿತ್ ಚಾಂಪಿಯನ್ ಶಿಪ್ನ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು
ಚಿನ್ನದ ಪದಕವನ್ನು, ಕುಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು ಪಡೆದಿರುತ್ತಾನೆ.
ಎಂಟನೇ ತರಗತಿಯ ಲಕ್ಷಣ್ ಅಂಬೆಕಲ್ಲು ದ್ವಿತೀಯ ಸ್ಥಾನವನ್ನು ಪಡೆದು ಬೆಳ್ಳಿ ಪದಕವನ್ನು, ಏಳನೇ ತರಗತಿಯ ಫಾತಿಮತ್ ಅಮ್ನ ದ್ವಿತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು, ಆರನೇ ತರಗತಿಯ ಜೀವಿತ್ ಬಿ ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು, ತನ್ವಿತ್ ಕೆ ಎಸ್ ತೃತೀಯ ಸ್ಥಾನ ಪಡೆದು ಕಂಚಿನ ಪದಕವನ್ನು, ವಂಶಿಕ್ ಬಿ ಹೆಚ್ ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು, ಐದನೇ ತರಗತಿಯ ಉಝರ್ ಅಬ್ಬಾಸ್ ತೃತೀಯ ಸ್ಥಾನವನ್ನು ಪಡೆದು ಕಂಚಿನ ಪದಕವನ್ನು ಪಡೆದಿರುತ್ತಾರೆ.ಶಾಲಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು. ಜೆ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.