ಪುತ್ತೂರು: ಸುಳ್ಯದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ 2025ರಲ್ಲಿ ಪುತ್ತೂರು ಸೈಂಟ್ ವಿಕ್ಟರ್ಸ್ ಆಂಗ್ಲ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿ ಅದ್ವೈತ್ ಕೃಷ್ಣ ಎ.ಕೆ ಹಳದಿ ಬೆಲ್ಟ್ ವಿಭಾಗದ 7 -8 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ
ವೈಯಕ್ತಿಕ ಕಟಾದ ಚಿನ್ನದ ಪದಕ ಮತ್ತು ಕುಮಿಟೆಯಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಅದ್ವೈತ್ ಕರಾಟೆ ಅಂಡ್ ಆಲೈಡ್ ಆರ್ಟ್ನ ಪುತ್ತೂರು ಇದರ ಮುಖ್ಯಸ್ಥ ಸುರೇಶ್, ಎಂ ಇವರ ಶಿಷ್ಯ. ಕಲ್ಲಪ್ಪಳ್ಳಿಯ ಆಲುಗುಂಜ ಕುಮಾರ್ ಎ.ಪಿ ಮತ್ತು ಶ್ರೀಮಣಿ ದಂಪತಿಯ ಪುತ್ರ.












