ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಕಾರ್ಯಾಗಾರ ‘ಕಾಫಿಕೊ’ ಆ.25ರಂದು ಸುಳ್ಯ ಸಿಎ ಬ್ಯಾಂಕ್ನ ಸಭಾಂಗಣದಲ್ಲಿ ಉದ್ಘಾಟನೆಗೊಂಡಿತು.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ಕಾಫಿ ಬೋರ್ಡ್ ಚೆಯರ್ಮೆನ್ ದಿನೇಶ್ ಎಂ.ಜೆ, ಕಾಫಿ ಬೋರ್ಡ್ ಆಫ್ ಇಂಡಿಯಾ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್ನಬಾರ್ಡ್ ಡಿಡಿಎಂ ಸಂಗೀತ ಕರ್ತ, ತೋಟಗಾರಿಕಾ ಇಲಾಖೆಯ
ಉಪನಿರ್ದೇಶಕರಾದ ಮಂಜುನಾಥ್ ಸಕಲೇಶಪುರ 7 ಬೀನ್ ಟೀಂ ಸ್ಥಾಪಕಾಧ್ಯಕ್ಷ ಡಾ. ಪ್ರದೀಪ್ ಸಕಲೇಶಪುರ, 7 ಬೀನ್ ಟೀಂ ಚೆಯರ್ಮೆನ್ ಡಾ.ಧರ್ಮರಾಜ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯಾರಾ ಫರ್ಟಿಲೈಸರ್ನ ಮುಖ್ಯಸ್ಥರಾದ ಬೋಪಣ್ಣ, ಜೈನ್ ಇರಿಗೇಷನ್ನ ಕಾರ್ತಿಕ್ ಮಂಜುನಾಥ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ, ಕಾಪಿಕೊ ಕಾರ್ಯಾಗಾರದ ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಸಹ ಸಂಚಾಲಕ ರಾಮಕೃಷ್ಣ ಭಟ್ ಕುರುಂಬುಡೇಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲುವ ಮಹತ್ತರ ಯೋಜನೆಯಾಗಿ ಕಾಫಿ ಬೆಳೆಯನ್ನು ಪ್ರೋತ್ಸಾಹಿಸಲು ಕಾರ್ಯಾಗಾರ ರೂಪಿಸಲಾಗಿದೆ. ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ಬೆಳೆಯುವ ನಿಟ್ಟಿನಲ್ಲಿ ಸಲಹೆ, ಮಾರ್ಗದರ್ಶನ ನೀಡಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.ಕೃಷಿಯಲ್ಲಿ ಸುಸ್ಥಿರ ಹಾಗೂ ಲಾಭದಾಯಕ ಪರ್ಯಾಯ ಬೆಳೆಗಳ ಗುರುತಿಸುವಿಕೆ, ಆರ್ಥಿಕ ಭದ್ರತೆ, ಕಾಫಿ ಬೆಳೆಯ ಹೊಸ ಸಾಧ್ಯತೆಗಳ ಅನ್ವೇಷಣೆ, ತಂತ್ರಜ್ಞಾನ ಬಳಸಿ ಗುಣಮಟ್ಟದ ಕಾಫಿ ಉತ್ಪಾದಿಸುವ ಗುರಿ ವಿಶಿಷ್ಟತೆಯ ಕರಾವಳಿ ಕಾಫಿಗಾಗಿ ಪ್ರಯತ್ನ, ವೈಜ್ಞಾನಿಕ, ವಿಶಿಷ್ಟ ಕಾಫಿ ಅಡಿಕೆಗೂ ಮೀರಿ ಮಿಷನ್ ಕರಾವಳಿ ಕಾಫಿಯನ್ನು ತಯಾರಿಸುವ ಬ್ರಾಂಡ್ ಕಾಫಿ ನಿರ್ಮಾಣ ಗುರಿ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಕಾಫಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.












