ಉಡುಪಿ: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ʼಕಾಂತಾರʼ ಸಿನಿಮಾದ ಎರಡನೇ ಭಾಗ ‘ಕಾಂತಾರ ಚಾಪ್ಟರ್ 1’ ಮುಹೂರ್ತ ಕಾರ್ಯಕ್ರಮ ಕುಂದಾಪುರದ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ಸನ್ನಿಧಿಯಲ್ಲಿ ನ.27 ರಂದು ನೆರವೇರಿದೆ.ತುಳುನಾಡಿನ ದೈವ ಹಾಗೂ ಆಚರಣೆ ಸುತ್ತ ಸಾಗಿದ ʼಕಾಂತಾರʼ ಸಿನಿಮಾ ಬಾರೀ ಹಿಟ್ ಆಗಿತ್ತು. ಎರಡನೇ ಭಾಗ ಸಿನಿಮಾದ ಚಾಪ್ಟರ್ -1 ಬರಲಿದೆ ಎಂದು
ರಿಷಬ್ ಶೆಟ್ಟಿ ಹಿಂದೆಯೇ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಬಗ್ಗೆ ಕುತೂಹಲ ಹೆಚ್ಚಿದೆ.ಮುಹೂರ್ತದ ಜೊತೆಗೆ ಫಸ್ಟ್ ಲುಕ್ ರಿಲೀಸ್ ಮಾಡಿದೆ. ರಿಷಬ್ ಶೆಟ್ಟಿ ಕೈಯಲ್ಲಿ ತ್ರಿಶೂಲ ಇಟ್ಟುಕೊಂಡು, ಉದ್ದ ಗಡ್ಡವನ್ನು ಬಿಟ್ಟಿದ್ದಾರೆ. ಇನ್ನೊಂದು ಕೈಯಲ್ಲಿ ಕೊಡಲಿ ರೀತಿಯ ಆಯುಧವನ್ನು ಇಟ್ಟುಕೊಂಡು ರೌದ್ರ ಅವತಾರವನ್ನು ತಾಳಿದ್ದಾರೆ. ಯುದ್ದದಲ್ಲಿ ಹೋರಾಡುವ ರೀತಿ ತೋರಿಸಲಾಗಿದೆ. 7 ಭಾಷೆಯಲ್ಲೂ ಪೋಸ್ಟರ್ ರಿಲೀಸ್ ಮಾಡಲಾಗಿದೆ. ಅಜನೀಶ್ ಅವರ ಮ್ಯೂಸಿಕ್ ಟೀಸರ್ ನಲ್ಲಿ ವೀಕ್ಷಕರನ್ನು ರೋಮಾಂಚನಗೊಳಿಸಿದೆ.ಹೊಂಬಾಳೆ ನಿರ್ಮಾಣದ ʼಕಾಂತಾರʼ ಪ್ರೀಕ್ವೆಲ್ ಈ ಬಾರಿ ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ, ಬೆಂಗಾಲಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಮುಂದಿನ ವರ್ಷದ ಬೇಸಿಗೆಯಲ್ಲಿ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.
ಕರಾವಳಿ ಭಾಗಕ್ಕೆ ಸಂಬಂಧಪಟ್ಟ ಕಥೆಯನ್ನು ಇದು ಹೊಂದಿದ್ದು ಈ ಭಾಗದ ಲೊಕೇಶನ್ಗಳಲ್ಲೇ ಶೂಟ್ ನಡೆಯಲಿದೆ ಎಂದು ಹೇಳಲಾಗಿದೆ.





