ಸುಳ್ಯ:ಡಿ.10 ರಂದು ಸುಳ್ಯ ತಾಲೂಕು 26 ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಂಪಾಜೆ ಗ್ರಾಮದ ಗೂನಡ್ಕದ ಬೀಜದಕಟ್ಟೆ ಸಜ್ಜನ ಸಭಾ ಭವನದಲ್ಲಿ ನಡೆಯಲಿದೆ. ಸಮ್ಮೇಳನದ ಪೂರ್ವ ಸಿದ್ಧತಾ ಸಭೆ ಸಜ್ಜನ ಸಭಾ ಭವನದಲ್ಲಿ ನಡೆಯಿತು.ಸಭೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ಹಾಗು ಕಾರ್ಯಾಧ್ಯಕ್ಷರಾಗಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಬಂದರು, ಮೀನುಗಾರಿಕೆ ಹಾಗೂ ಒಳನಾಡು ಸಾರಿಗೆ

ಸಚಿವ ಎಸ್.ಅಂಗಾರ,ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿವೃತ್ತ ಆಯುಕ್ತರಾದ ಟಿ.ಶ್ಯಾಮ್ ಭಟ್, ಪೋಷಕಾಧ್ಯಕ್ಷರಾಗಿ ಸೋಮಶೇಖರ ಕೊಯಿಂಗಾಜೆ, ಸಂತೋಷ್ ಕುತ್ತಮೊಟ್ಟೆ, ಡಾ.ಡಿ.ವಿ.ಲೀಲಾಧರ್, ಉಪಾಧ್ಯಕ್ಷರಾಗಿ ಕೆ.ಪಿ.ಜಗದೀಶ್, ಯು.ಬಿ.ಚಕ್ರಪಾಣಿ, ಅಬ್ಬಾಸ್ ಹಾಜಿ ಸಂಟ್ಯಾರ್, ಬಿ.ಎಸ್.ಯಮುನಾ, ಲಿಸ್ಸಿ ಮೊನಾಲಿಸಾ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ ಮಾಸ್ತರ್,ಜತೆ ಕಾರ್ಯದರ್ಶಿಯಾಗಿ ಜಯಾನಂದ ಸಂಪಾಜೆ,ಶೌವಾದ್ ಗೂನಡ್ಕ, ರಹೀಮ್ ಬೀಜದಕಟ್ಟೆ,ಆಶಾ ಬೀಜದಕಟ್ಟೆ ಕೋಶಾಧಿಕಾರಿಯಾಗಿ ಪಿ.ಬಿ. ಸುಧಾಕರ ರೈ ಆಯ್ಕೆಯಾದರು. ವಿವಿಧ ಸಮಿತಿಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮ ಸಂಯೋಜನಾ ಸಮಿತಿ: ಸಂಚಾಲಕ
ಚಿದಾನಂದ ಮಾಸ್ತರ್, ಆರ್ಥಿಕ ಸಮಿತಿ:ಸಂಚಾಲಕರು-ರಾಮಚಂದ್ರ ಕಲ್ಲುಗದ್ದೆ, ಆಹಾರ ಸಮಿತಿ:ಸಂಚಾಲಕರು- ಕೆ.ಆರ್.ಜಗದೀಶ್ ರೈ,
ಮೆರವಣಿಗೆ ಸಮಿತಿ: ಸಂಚಾಲಕರು-ಮಹಮ್ಮದ್ ಕುಂಞ ಗೂನಡ್ಕ
ಪ್ರಚಾರ ಸಮಿತಿ:ಸಂಚಾಲಕರು ಜಿ.ಕೆ.ಹಮೀದ್ ಗೂನಡ್ಕ.

ವೇದಿಕೆ ಮತ್ತು ಅಲಂಕಾರ ಸಮಿತಿ ಸಂಚಾಲಕರು-ಅಶ್ರಫ್ ಗುಂಡಿ, ಸಾಂಸ್ಕ್ರತಿಕ ಸಮಿತಿ ಸಂಚಾಲಕರಾಗಿ ಭವಾನಿಶಂಕರ ಅಡ್ತಲೆ,ಸ್ವಚ್ಚತೆ ಮತ್ತು ನೀರಾವರಿ ಸಮಿತಿ ಸಂಚಾಲಕರಾಗಿ ಪಿ.ಕೆ.ಅಬೂಸಾಲಿ ಗೂನಡ್ಕ,ಸನ್ಮಾನ ಸಮಿತಿ ಸಂಚಾಲಕರಾಗಿ ಅಬ್ದುಲ್ಲ ಮಾಸ್ತರ್, ಅರಂತೋಡು,ಸ್ಮರಣ ಸಂಚಿಕೆ ಸಮಿತಿ ಸಂಚಾಲಕರಾಗಿ ಸಂಜೀವ ಕುದ್ಪಾಜೆ
ವಸ್ತು ಪ್ರದರ್ಶನ ಸಮಿತಿ ಸಂಚಾಲಕರಾಗಿ ದಿನಕರ ಸಣ್ಣಮನೆ,ಸ್ಪರ್ಧಾ ಸಮಿತಿ ಸಂಚಾಲಕರಾಗಿ ಹನುಮಂತಪ್ಪ ಮಾಸ್ತರ್,
ಆತಿಥ್ಯ ಸಮಿತಿ ಸಂಚಾಲಕರಾಗಿ ಕಾಂತಿ ಬಿ.ಎಸ್, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಚಿದಾನಂದ ಮೂಡನಕಜೆ ಆಯ್ಕೆಯಾದರು.

ಗೌರವ ಸಲಹೆಗಾರರಾಗಿ ರಾಜಾರಾಮ್ ಕೀಲಾರು,
ಕೆ.ಆರ್.ಗಂಗಾಧರ್, ಟಿ.ಎಂ.ಶಹೀದ್ ತೆಕ್ಕಿಲ್,
ಇಬ್ರಾಹಿಂ ಗೂನಡ್ಕ,ಬಿ.ಕೆ.ಚಂದ್ರಶೇಖರ್, ಲೋಕಯ್ಯ ಗೌಡ,ವೀರಪ್ಪ ಗೌಡ ದೋಳ,ಕೊಂದಲಕಾಡು ನಾರಾಯಣ ಭಟ್, ಕೆ.ಪಿ.ಪ್ರಕಾಶ್,ಕೆ.ಸಿ.ನಾರಾಯಣ ಗೌಡ, ಎಸ್.ಪಿ.ಲೋಕನಾಥ್, ರುಕ್ಮಯ್ಯ ದಾಸ್ ಆಯ್ಕೆಯಾದರು.