ಸುಳ್ಯ:ಕಾರ್ಯಕರ್ತರ ವಿರುದ್ಧ ಗಡಿಪಾರು ಅಸ್ತ್ರ ಬಳಸಿ ಸಂಘ ಪರಿವಾರ ಸಂಘಟನೆಗಳನ್ನು ದಮನಿಸುವ ಪ್ರಯತ್ನವನ್ನು ಸರಕಾರ ಮಾಡುತಿದೆ. ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ನಡೆಸುವ ಈ ಕ್ರಮ ಖಂಡನೀಯ ಎಂದು ಸುಳ್ಯ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಂಘ ಪರಿವಾರ ಸಂಘಟನೆಗಳ ಕಾರ್ಯಕರ್ತರ
ವಿರುದ್ಧ ಜಾರಿ ಮಾಡಿದ ಗಡಿಪಾರು ನೋಟೀಸ್ ವಿರುದ್ಧ ಉಗ್ರ ಹೋರಾಟ ನಡೆಸಲಾಗುವುದು. ಇದರ ವಿರುದ್ಧ ನ.20 ರಂದು ಸುಳ್ಯ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಗೋರಕ್ಷಣೆ, ಹಿಂದೂ ಸಮಾಜದ ರಕ್ಷಣೆಗಾಗಿ ಸಂಘ ಪರಿವಾರ ಸಂಘಟನೆಗಳು ಕೆಲಸ ಮಾಡುತಿದೆ. ಇದೀಗ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಲಾಗುತಿದೆ. ಇದರ ವಿರುದ್ಧ ಬೃಹತ್ ಹೊರಾಟ ಸಂಘಟಿಸಲಾಗುವುದು ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸಮಶೇಖರ ಪೈಕ, ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ ಮಾತನಡಿದರು. ಸುದ್ದಿಗೋಷ್ಠಿಯಲ್ಲಿ ಬಜರಂಗದಳ ಸಂಚಾಲಕ ಹರಿಪ್ರಸಾದ್ ಬಿ.ವಿ., ಪ್ರಮುಖರಾದ ನಿಕೇಶ್ ಉಬರಡ್ಕ, ನವೀನ್ ಎಲಿಮಲೆ, ಮಧುಸೂದನ್ ಉಪಸ್ಥಿತರಿದ್ದರು.









