ಸುಳ್ಯ: ಸುಳ್ಯದಲ್ಲಿ ಅಳವಡಿಸಿದ ಅಯೋಧ್ಯಾ ರಾಮ ಮಂದಿರ ಲೋಕಾರ್ಪಣೆಯ ಬ್ಯಾನರ್ ಹರಿದು ಹಾನಿ ಮಾಡಿರುವುದನ್ನು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಖಂಡಿಸಿದ್ದಾರೆ. ಬ್ಯಾನರ್ ಹರಿದು ಹಾನಿ ಮಾಡಿರುವುದು ಹೇಡಿತನದ ಕೆಲಸ, ಒಂದು ಬ್ಯಾನರ್ ಹರಿದಿರಬಹುದು, ಹಾನಿ ಮಾಡಬಹುದು ಆದರೆ ಹಿಂದೂ ಸಮಾಜದ ವಿಶ್ವಾಸಕ್ಕೆ ಹಾನಿ ಮಾಡಲು ಸಾಧ್ಯವಿಲ್ಲ.ಪ್ರತಿಯೊಬ್ಬ ಸ್ವಾಭಿಮಾನಿ ಹಿಂದೂ ಬಂಧು ತಮ್ಮ ತಮ್ಮ ಶಕ್ತಿಗೆ ಅನುಸರವಾಗಿ ಅಯೋಧ್ಯಾ ರಾಮ ಮಂದಿರದ ಹೊಸ ಹೊಸ ಬ್ಯಾನರ್ ಗಳನ್ನು ಸುಳ್ಯ ದಾದ್ಯಂತ ಹಾಕಬೇಕು ಎಂದು ಸುಳ್ಯ ಮಂಡಲ ಬಿಜೆಪಿ ಕರೆ ಕೊಡುತ್ತಿದೆ ಎಂದು ಅವರು ಹೇಳಿದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.









